ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ವಿರುದ್ಧ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 190 ರನ್ ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಗೆ ಫಿಲ್‌ಸಾಲ್ಟ್ (16)ಆರಂಭಿಕವಾಗಿ ಬಿರುಸನ್ನು ಕಟ್ಟಿಕೊಟ್ಟರು. ಆದರೆ ಸಾಲ್ಟ್ ಹೆಚ್ಚು ಹೊತ್ತು ನಿಲ್ಲದೆ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ಇತ್ತರು.
ಭರವಸೆ ಆಟಗಾರ ವಿರಾಟ್ ಕೊಹ್ಲಿ ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದರು ಆದರೆ ಕೊಹ್ಲಿ(43) ಅರ್ಧಶತಕದ ಅಂಚಿನಲ್ಲಿ ಎಡವಿದರು. ಮಯಂಕ್ ಅಗರವಾಲ್(24) ಕೊಹ್ಲಿಗೆ ಉತ್ತಮ ಬೆಂಬಲ ನೀಡಿದರು ಜೊತೆಯಾಡುದಲ್ಲಿ ವಿಫಲರಾದರು.
ನಾಯಕ ರಜತ್ ಪಾಟೀದರ್ 16 ಎಸೆತಗಳಲ್ಲಿ 26 ರನ್ ಗಳಿಸಿ ಔಟ್ ಆದರು. ಮತ್ತೊಂದೆಡೆ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಬಿರುಸಿನ ಆಟವಾಡುವ ಮೂಲಕ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು.
ಅಂತಿಮವಾಗಿ ಆರ್‌ಸಿಬಿ ಒಂಬತ್ತು ವಿಕೆಟ್ ನಷ್ಟಕ್ಕೆ 190ರನ್ ಗಳಿಸಿ ಪಂಜಾಬ್‌ಗೆ 191 ಗುರಿ ಒಡ್ಡಿತು.





