ಲಖನೌ: ಸತತ ಐದು ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಏಳನೇ ಪಂದ್ಯದಲ್ಲಿ ಗೆಲುವು ಸಿಕ್ಕಿದೆ. ನಾಯಕ ಎಂ.ಎಸ್ ಧೋನಿ ಹಾಗೂ ಶಿವಂ ದುಬೆ ಅವರ ಜುಗಲ್ ಬಂದಿ ಹೋರಾಟಕ್ಕೆ ಗೆಲುವು ಸಿಕ್ಕಿದ್ದು, ಸಿಎಸ್‌ಕೆ 5 ವಿಕೆಟ್‌ಗಳಿಂದ ಲಖನೌ ಸೂಪೃ ಜೈಂಟ್ಸ್ ತಂಡವನ್ನು ಮಣಿಸಿದೆ.
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಖನೌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಚೆನ್ನೈ 19.3 ಓವರ್‌ಗಳಲ್ಲಿ 5 ವಿಕೆಟ್ ಬಾಕಿ ಇರುವಂತೆ ಗೆಲುವಿನ ದಡ ಸೇರಿತು.
ಲಖನೌ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಖನೌಗೆ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಮಾರ್ಕ್ರಂ 6(6) ರನ್‌ಗಳಿಸಿ ಔಟಾದರೇ, ಭರವಸೆ ಆಟಗಾರ ಪೂರನ್ ಕೇವಲ 8(9) ರನ್ ಗಳಿಸಿ ಪೆವಿಲಿಯನ್ ಸೇರಿದರು.
ನಂತರ ಜೊತೆಯಾದ ಮಿಚೆಲ್ ಮಾರ್ಷ್ ಮತ್ತು ನಾಯಕ ರಿಷಭ್ ಪಂತ್ ತಂಡಕ್ಕೆ ಚೇತರಿಕೆ ಆಟವಾಡಿದರು. ಮಾರ್ಷ್ 30(25), ನಾಯಕ ಪಂತ್ 49 ಎಸೆತ, 4 ಬೌಂಡರಿ, 4 ಸಿಕ್ಸರ್ ಸಹಿತ 63 ರನ್ ಬಾರಿಸಿ ಔಟಾದರು.
ಉಳಿದಂತೆ ಬದೋನಿ 22(17), ಅಬ್ದುಲ್ ಸಮದ್ 20(11), ಶಾರ್ದುಲ್ ಠಾಕೂರ್ 6(4) ರನ್ ಗಳಿಸಿದರು.
ಚೆನ್ನೈ ಪರ ರವೀಂದ್ರ ಜಡೇಜಾ ಹಾಗೂ ಪತಿರಣ ತಲಾ ಎರಡು ವಿಕೆಟ್, ಖಲೀಲ್ ಅಹ್ಮದ್ ಮತ್ತು ಅನ್ಸುಲ್ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ರಶೀದ್ 27(19), ರಚಿನ್ ರವೀಂದ್ರ 37(22) ರನ್ ಗಳಿಸಿ ಔಟಾದರು. ರಾಹುಲ್ ತ್ರಿಪಾಟಿ 9(10), ಜಡೇಜಾ 7(11), ವಿಜಯ್ ಶಂಕರ್ 9(8) ರನ್ ಗಳಿಸಿ ಔಟಾದರು.
ಕೊನೆಯಲ್ಲಿ ಒಂದಾದ ನಾಯಕ ಎಂ.ಎಸ್ ಧೋನಿ ಹಾಗೂ ಶುವಂ ದುಬೆ ಚೆನ್ನೈ ಗೆಲುವಿಗೆ ಸಹಕರಿಸಿದರು. ಈ ಜೋಡಿ ಐವತ್ತು ರನ್‌ಗಳ ಜೊತೆಯಾಟ ನೀಡಿದರು. ಶಿವಂ ದುಬೆ ನಾಟ್‌ಔಟ್ ಆಗಿ 37 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 43 ರನ್ ಗಳಿಸಿದರೇ, ಧೋನಿ ಔಟಾಗದೇ 11 ಎಸೆತಗಳಲ್ಲಿ 4 ಫೊರ್ ಹಾಗೂ 1 ಸಿಕ್ಸರ್ ಸಹಿತ 26 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಲಖನೌ ಪರ ರವಿ ಬಿಷ್ಣೋಯಿ ಎರಡು ವಿಕೆಟ್, ದಿಗ್ವೇಶ್, ಆವೇಶ್ ಖಾನ್ ಮತ್ತು ಮಾರ್ಕ್ರಂ ತಲಾ ಒಂದೊಂದು ವಿಕೆಟ್ ಪಡೆದರು.





