Mysore
18
overcast clouds

Social Media

ಭಾನುವಾರ, 25 ಜನವರಿ 2026
Light
Dark

IPL 2025 | ಈ ಬಾರಿಯ ಉದಯಿಸಲಿದೆ ಹೊಸ ಚಾಂಪಿಯನ್‌ ತಂಡ : ಫೈನಲ್‌ನಲ್ಲಿ ಆರ್‌ಸಿಬಿಗೆ ಪಂಜಾಬ್‌ ಎದುರಾಳಿ

ಅಹಮದಾಬಾದ್: ಇಂಡಿಯನ್‌ ಪ್ರೀಮಿಯರ್‌ ಲೀಗ್(ಐಪಿಎಲ್‌) ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಕಿರೀಟದ ಹುಡುಕಾಟದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ನಾಳೆ (ಮೇ.3) ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳು ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿವೆ. ಈ ಎರಡು ತಂಡಗಳು ಗೆದ್ದರೂ ನೂತನ ದಾಖಲೆ ಸೃಷ್ಟಿಯಾಗಲಿದೆ. ಏಕೆಂದರೆ ಇತ್ತಂಡಗಳು ಇದುವರೆಗೆ ಟ್ರೋಫಿ ಗೆದ್ದಿಲ್ಲ.

ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಇದರ ನಂತರ, ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ -2 ತಲುಪಿತು. ಇಲ್ಲಿ ಪಂಜಾಬ್ ಕಿಂಗ್ಸ್ ತಂಡದ ಎದುರು ಮುಂಬೈ ಇಂಡಿಯನ್ಸ್ ಸೋಲನ್ನು ಎದುರಿಸಬೇಕಾಯಿತು. ಈಗ ಆರ್‌ಸಿಬಿ ಮತ್ತು ಪಂಜಾಬ್ ಎರಡೂ ತಂಡಗಳು ಚೊಚ್ಚಲ ಪ್ರಶಸ್ತಿ ಗೆಲ್ಲಲು ಸೆಣಸಾಡಲಿದೆ.

ಕೊಹ್ಲಿಯು ಪ್ರತಿ ವರ್ಷದಂತೆ ಈ ವರ್ಷವೂ 614 ರನ್ ಗಳಿಸಿದ್ದಾರೆ. ಆದರೆ ಈ ಬಾರಿ ತಂಡ ಅವರನ್ನೇ ನೆಚ್ಚಿಕೊಂಡಿಲ್ಲ. ಸಮತೂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದೆ. ಈ ಬಾರಿ ಕೊಹ್ಲಿ ಬ್ಯಾಟಿಂಗ್ ಮಾತ್ರ ಗಮನ ಹರಿಸಲಿಲ್ಲ. ಆರ್‌ಸಿಬಿಯನ್ನು ಒಂದು ಉತ್ತಮ ತಂಡವಾಗಿ ಕಟ್ಟುವಲ್ಲಿ ಎಲ್ಲ ರೀತಿಯಲ್ಲಿಂದಲೂ ಶ್ರಮಿಸಿದ್ದಾರೆ.

ಫಿಲ್ ಸಾಲ್ಟ್ ಭಾರತದ ನೆಲಕ್ಕೆ ಹೊಂದಿಕೊಳ್ಳುವ ಮೂಲಕ ಆರ್‌ಸಿಬಿ ಪಡೆಯ ಪ್ರಮುಖ ಬ್ಯಾಟರ್ ಆಗಿದ್ದರೆ, ಮಯಾಂಕ್ ಅಗರ್‌ವಾಲ್, ನಾಯಕ ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ನಂಬಿಕೆಯುಳ್ಳ ಬ್ಯಾಟ್ಸ್‌ಮನ್‌ಗಳಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ.

ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಮಯಾಂಕ್ ಅಗರವಾಲ್, ಸ್ವಸ್ತಿಕ್ ಚಿಕಾರಾ, ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ, ಜೇಕಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ರಸಿಖ್‌ದರ್, ಭುವನೇಶ್ವರ್ ಕುಮಾರ್, ಸಲಾಮ್ ದಾರ್, ಸುಯಶ್ ಶರ್ಮ ತಂಡಕ್ಕೆ ಆಧಾರ ಸ್ತಂಭವಾಗಿದ್ದಾರೆ.

ಅತ್ತ ಯಾವ ಹಂತದಲ್ಲೂ ಪಂಜಾಬ್‌ ತಂಡವನ್ನು ಆರ್‌ಸಿಬಿ ಹಗುರವಾಗಿ ಪರಿಗಣಿಸುವಂತಿಲ್ಲ. ನಾಯಕ ಶ್ರೇಯಸ್‌ ಅಯ್ಯರ್‌ ಸೇರಿದಂತೆ ತಂಡದ ಆಟಗಾರರೆಲ್ಲಾ ಅಮೋಘ ಪ್ರದರ್ಶನ ನೀಡಿದ್ದಾರೆ. ಪ್ರಭಸಿಮ್ರನ್‌ ಸಿಂಗ್‌, ಜೋಶ್‌ ಇಂಗ್ಲಿಸ್‌, ಪ್ರಿಯಾಂಶ್‌ ಆರ್ಯಾ, ನೇಹಲ್‌ ವದೇರಾ, ಶಶಾಂಕ್‌ ಸಿಂಗ್‌, ಮಾರ್ಕಸ್‌ ಸ್ಟೋಯಿನಿಸ್‌, ಅರ್ಷದೀಪ್‌ ಸಿಂಗ್‌, ಯಜುವೇಂದ್ರ ಚಾಹಲ್‌, ವಿಜಯ ಕುಮಾರ್‌ ವೈಶಾಖ ತಂಡಕ್ಕೆ ಬಲ ತುಂಬಿದ್ದಾರೆ.

ಮಳೆ ಪರಿಣಾಮ ಬೀರಲ್ಲ ;
ಮಳೆಯು ಫೈನಲ್ ಪಂದ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಮುನ್ಸೂಚನೆಗಳಿಲ್ಲ. ಒಂದು ವೇಳೆ ಆಟದ ಸಮಯಕ್ಕೆ ಮಳೆ ಬಂದರೂ 120 ನಿಮಿಷಗಳವರೆಗೆ ಸಮಯ ವಿಸ್ತರಣೆ ಅಥವಾ ಬೇರೊಂದು ದಿನಕ್ಕೆ ಪಂದ್ಯ ನಿಗದಿತ ಮತ್ತಿತರ ಕ್ರಮ ಕೈಗೊಳ್ಳಬಹುದು.

Tags:
error: Content is protected !!