ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದ್ದು, ಸೌದಿ ಅರೇಬಿಯಾದಲ್ಲಿ ನವೆಂಬರ್.24 ಮತ್ತು 25ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ.
ಐಪಿಎಲ್ ಸೀಸನ್ 18ರ ಹರಾಜಿನಲ್ಲಿ ಒಟ್ಟು 574 ಆಟಗಾರರ ಹೆಸರು ಪಟ್ಟಿಯಲ್ಲಿದ್ದು, 366 ಭಾರತೀಯ ಆಟಗಾರರಿದ್ದಾರೆ. ಅದರಲ್ಲಿ ಕರ್ನಾಟಕದ ಸ್ಟಾರ್ ಆಟಗಾರರ ಜೊತೆ ಭವಿಷ್ಯದ ಯುವ ಆಟಗಾರರು ಈ ಆಕ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ ಮೆಗಾ ಆಕ್ಷನ್‌ನಲ್ಲಿ ಕರ್ನಾಟಕ ಆಟಗಾರರ ಹೆಸರು ಕೆಳಕಂಡಂತಿದೆ.
ಕೆ.ಎಲ್.ರಾಹುಲ್: ಐಪಿಎಲ್ ಸೀಸನ್ 18ರ ಸ್ಟಾರ್ ಆಟಗಾರ. ಕಳೆದ ಸೀಸನ್‌ನ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮನ್ನಡೆಸಿದ್ದರು.
ಮಯಾಂಕ್ ಅಗರವಾಲ್: ಕಳೆದ ಸೀಸನ್‌ನಲ್ಲಿ ಸನ್ ರೈಸರ್ಸ್ ತಂಡ ಪ್ರತಿನಿಧಿಸಿದ್ದರು.
ಮನೀಶ್ ಪಾಂಡೆ: ಐಪಿಎಲ್ 2024ರ ಚಾಂಪಿಯನ್ ತಂಡದ ಭಾಗವಾಗಿದ್ದರು.
ಪ್ರಸಿದ್ಧ್ ಕೃಷ್ಣ: 2024ರ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು.
ಮುಂದುವರಿದು ಶ್ರೇಯಸ್ ಗೋಪಾಲ್, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ದೇವದತ್ತ ಪಡಿಕಲ್, ಪ್ರವೀಣ್ ದುಬೆ, ವಿದ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಖ್, ಲವನೀತ್ ಸಿಸೋಡಿಯಾ, ಎಲ್.ಆರ್.ಚೇತನ್, ಆರ್.ಸ್ಮರಣ್, ಅಭಿಲಾಶ್ ಶೆಟ್ಟಿ, ಮನ್ವಂತ್ ಕುಮಾರ್, ಹಾರ್ದಿಕ್ ರಾಜ್, ಬಿ.ಆರ್.ಶರತ್, ಕೃಷ್ಣನ್ ಶ್ರೀಜಿತ್, ದೀಪಕ್ ದೇವಾಡಿಗ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.