Mysore
19
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಐಪಿಎಲ್‌ 2025: 13 ಮಂದಿ ಕನ್ನಡಿಗರಿಗೆ ಆಡುವ ಅವಕಾಶ

ಸೌದಿ ಅರೇಬಿಯಾದಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಕರ್ನಾಟಕದ 13 ಆಟಗಾರರು ವಿವಿಧ ತಂಡಗಳಿಗೆ ಹರಾಜಾಗುವ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಇಂಡಿಯನ್‌ ಪ್ರೀಮಿಯರ್ ಲೀಗ್‌(ಐಪಿಎಲ್‌ 2025) ಸೀಸನ್‌-18 ರಲ್ಲಿ ಒಟ್ಟು 10 ತಂಡಗಳು ಆಡಲಿದ್ದು, 182 ಆಟಗಾರರು ಆಯ್ಕೆಯಾಗಿದ್ದಾರೆ. ಇದರಲ್ಲಿ ಕರ್ನಾಟಕದ ಮೂವರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದರೆ, ಪಂಜಾಬ್‌ ಹಾಗೂ ಆರ್‌ಸಿಬಿ ತಂಡದಲ್ಲಿ ತಲಾ ಇಬ್ಬರು ಕನ್ನಡಿಗರಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಕನ್ನಡದ ಆಟಗಾರರ ಪಟ್ಟಿ ಕೆಳಕಂಡಂತಿದೆ: 

ಕೆಎಲ್‌ ರಾಹುಲ್‌ 14 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)‌

ಪ್ರಸಿದ್ಧ್‌ ಕೃಷ್ಣ 9.50 ಕೋಟಿ (ಗುಜರಾತ್‌ ಟೈಟಾನ್ಸ್‌)

ವೈಶಾಖ್‌ ವಿಜಯ್‌ ಕುಮಾರ್‌ 1.80 ಕೋಟಿ (ಪಂಜಾಬ್‌ ಕಿಂಗ್ಸ್‌)

ಕರುಣ್‌ ನಾಯರ್‌ 50 ಲಕ್ಷ (ಡೆಲ್ಲಿ ಕ್ಯಾಪಿಟಲ್ಸ್‌)

ಮನೀಷ್‌ ಪಾಂಡೆ 75 ಲಕ್ಷ (ಕೆಕೆಆರ್‌)

ಶ್ರೀಜಿತ್‌ ಕೃಷ್ಣನ್‌ 30 ಲಕ್ಷ (ಮುಂಬೈ ಇಂಡಿಯನ್ಸ್‌)

ಶ್ರೇಯಸ್‌ ಗೋಪಾಲ್‌ 30 ಲಕ್ಷ (ಚೆನ್ನೈ ಸೂಪರ್‌ ಕಿಂಗ್ಸ್‌)

ಅಭಿನವ್‌ ಮನೋಹರ್‌ 3.20 ಕೋಟಿ (ಸನ್‌ ರೈಸರ್ಸ್‌ ಹೈದರಾಬಾದ್‌)

ಮನ್ವಂತ್‌ ಕುಮಾರ್‌ 30 ಲಕ್ಷ (ಡೆಲ್ಲಿ ಕ್ಯಾಪಿಟಲ್ಸ್‌)

ಮನೋಜ್‌ ಭಾಂಡಗೆ 30 ಲಕ್ಷ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು)

ಲವನೀತ್‌ ಸಸೋಡಿಯಾ 30 ಲಕ್ಷ (ಕೊಲ್ಕತ್ತಾ ನೈಟ್‌ ರೈಡರ್ಸ್‌)

ಪ್ರವೀಣ್‌ ದುಬೆ 30 ಲಕ್ಷ (ಪಂಜಾಬ್‌ ಕಿಂಗ್ಸ್‌)

ದೇವದತ್‌ ಪಡಿಕ್ಕಲ್‌ 2 ಕೋಟಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು)

Tags:
error: Content is protected !!