Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

IPL 2024| ವಿಲ್‌ ಜಾಕ್‌ ಭರ್ಜರಿ ಶತಕ: ಜಿಟಿ ವಿರುದ್ಧ ಗೆದ್ದು, ಗೆಲುವಿನ ಲಯಕ್ಕೆ ಮರಳಿದ ಆರ್‌ಸಿಬಿ!

ಅಹಮದಾಬಾದ್‌: ವಿಲ್‌ ಜಾಕ್‌ ಭರ್ಜರಿ ಶತಕ, ವಿರಾಟ್‌ ಕೊಹ್ಲಿ ಅವರ ಅರ್ಧಶತಕ ಆಟದ ನೆರವಿನಿಂದ ಅತಿಥೇಯ ಗುಜರಾತ್‌ ಟೈಟನ್ಸ್‌ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 9 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಆ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಸೀಸನ್‌ 17ರ ಟೂರ್ನಿಯ 45ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಜಿಟಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಟೈಟನ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 200 ರನ್‌ ಕಲೆಹಾಕಿದರು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ವಿಲ್‌ ಜಾಕ್‌ ಹಾಗೂ ವಿರಾಟ್‌ ಕೊಹ್ಲಿ ಬೆನ್ನೆಲುಬಾದರು. ಆರ್‌ಸಿಬಿ ಅಂತಿಮವಾಗಿ 16 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 206 ರನ್‌ ಕಲೆಹಾಕಿ ಗೆಲುವಿನ ನಗೆ ಬೀರಿತು.

ಜಿಟಿ ಇನ್ನಿಂಗ್ಸ್‌: ಪೇ ಬ್ಯಾಕ್‌ ವೀಕ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಜಿಟಿಗೆ ಉತ್ತಮ ಆರಂಭ ಸಿಗಲಿಲ್ಲ. ವೃದ್ದಿಮಾನ್‌ ಶಾ 5ರನ್‌ ಗಳಿಸಿ ಔಟಾದರು. ಮತ್ತು ನಾಯಕ ಶುಭ್‌ಮನ್‌ ಗಿಲ್‌ 16 ರನ್‌ ಗಳಿಸಿ ಬೇಗನೇ ಪೆವಿಲಿಯನ್‌ ಸೇರಿದರು.

ಬಳಿಕ ಜೊತೆಯಾದ ಸುದರ್ಶನ್‌ ಮತ್ತು ಶಾರುಖ್‌ ಖಾನ್‌ ಜಿಟಿಗೆ ಚೇತರಿಕೆ ನೀಡಿದರು. ಸಾಯ್‌ ಸುದರ್ಶನ್‌ 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ ಸಹಿತ 84 ರನ್‌ ಬಾರಿಸಿದರು. ಶಾರುಖ್‌ ಖಾನ್‌ 58(30 ಎಸೆತ) ಅರ್ಧಶತಕ ದಾಖಲಿಸಿದರು. ಕೊನೆಯಲ್ಲಿ ಮಿಲ್ಲರ್‌ 26 ರನ್‌ ಬಾರಿಸಿ ತಂಡದ ಮೊತ್ತ 200 ಗಡಿ ದಾಟಲು ಸಹಕರಿಸಿದರು.

ಆರ್‌ಸಿಬಿ ಪರ ಸ್ವಪ್ನಿಲ್‌, ಮ್ಯಾಕ್ಸ್‌ವೆಲ್‌ ಹಾಗೂ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಆರ್‌ಸಿಬಿ ಇನ್ನಿಗ್ಸ್‌: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ಉತ್ತಮ ಆರಂಭ ದೊರೆಯಿತು. ನಾಯಕ ಫಾಫ್‌ ಡುಪ್ಲೆಸಿ 24(12) ರನ್‌ ಬಾರಿಸಿ ಸಾಯ್‌ ಕಿಶೋರ್‌ಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ನಂತರ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ವಿಲ್‌ ಜಾಕ್‌ ಪಂದ್ಯವನ್ನೇ ಮುಗಿಸಿದರು. ಈ ಜೋಡಿ ಜಿಟಿ ತಂಡವನ್ನು ಮನಬಂದಂತೆ ಚಚ್ಚಿದರು.

ವಿರಾಟ್‌ ಕೊಹ್ಲಿ 44 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್‌ ಸಹಿತ 70 ರನ್‌ ಬಾರಿಸಿದರೇ, ಮತ್ತೊಂದೆಡೆ ಮನಬಂದಂತೆ ಜಿಟಿ ಬೌಲರ್‌ಗಳನ್ನು ಚಚ್ಚಿದ ವಿಲ್‌ ಜಾಕ್‌ 41 ಎಸೆತ ಎದುರಿಸಿ 5ಬೌಂಡರಿ ಹಾಗೂ ಬರೋಬ್ಬರಿ 10 ಸಿಕ್ಸರ್‌ ಸಹಿತ 100 ಶತಕ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಜೋಡಿ 163 ರನ್‌ ಗಳ ಜೊತೆಯಾಟ ಕಾಣಿಕೆ ಕೊಟ್ಟರು. ಆರ್‌ಸಿಬಿ ಕೇವಲ 16 ಓವರ್‌ಗಳಲ್ಲೇ ಪಂದ್ಯವನ್ನು ಮುಗಿಸಿ ಬಿಟ್ಟರು.

ಗುಜರಾತ್‌ ಪರ ಸಾಯ್‌ ಕಿಶೋರ್‌ ಒಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ: ವಿಲ್‌ ಜಾಕ್‌

Tags:
error: Content is protected !!