Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

IPL-2024: ಪಂದ್ಯಗಳ ವೇಳಾಪಟ್ಟಿ, ನೇರಪ್ರಸಾರದ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ!

ಚೆನ್ನೈ: ಐಪಿಎಲ್‌ ಸೀಸನ್‌ 17 ಇದೇ ಮಾರ್ಚ್‌ 22ರಿಂದ (ನಾಳೆ) ನಡೆಯಲಿದೆ. ಆ ಮೂಲಕ ಚುಟುಕು ಕ್ರಿಕೆಟ್‌ಗೆ ಅದ್ದೂರಿ ಚಾಲನೆ ದೊರೆಯಲಿದೆ.

ಈ ಸೀಸನ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಅರ್‌ಸಿಬಿ) ತಂಡಗಳು ಚೆನ್ನೈನ ಪಿ.ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್‌ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದೆ. ಮಾರ್ಚ್ 22ರಿಂದ ಏಪ್ರಿಲ್ 7ರವರೆಗೆ ಮೊದಲ ಹಂತದಲ್ಲೆ ಕೇವಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ಬಿಡುಗಡೆ ಮಾಡಿದೆ. ಈ ಸೀಸನ್‌ನ ಫೈನಲ್ ಪಂದ್ಯವು ಮೇ 26ರಂದು ನಡೆಯಲಿದೆ.

ಉದ್ಘಾಟನಾ ಸಮಾರಂಭ ಹಿನ್ನೆಲೆಯಲ್ಲಿ ಐಪಿಎಲ್‌ ಆರಂಭಿಕ ಪಂದ್ಯ ಮಾತ್ರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಉಳಿದ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿವೆ. ಕೆಲವು ದಿನಗಳಲ್ಲಿ ಎರಡೆರಡು ಪಂದ್ಯಗಳು ನಡೆಯಲಿದ್ದು, ಆ ದಿನದ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಲಿದೆ.

ನೇರ ಪ್ರಸಾರ ವೀಕ್ಷಣೆ ಹೇಗೆ?
ಭಾರತದಲ್ಲಿ ಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ಐಪಿಎಲ್ 2024ರ ಆವೃತ್ತಿಯ ಪಂದ್ಯಗಳನ್ನು ನೇರಪ್ರಸಾರ ಮಾಡುತ್ತಿವೆ. ಲೈವ್‌ ಸ್ಟ್ರೀಮಿಂಗ್‌ನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ.

ಐಪಿಎಲ್ 2024ರ ಮೊದಲ ಹಂತದ ವೇಳಾಪಟ್ಟಿ

ಮಾರ್ಚ್ 22- ರಾತ್ರಿ 8:00 ಗಂಟೆ: ಸಿಎಸ್‌ಕೆ vs ಆರ್‌ಸಿಬಿ, ಚೆನ್ನೈ.

ಮಾರ್ಚ್ 23- ಮಧ್ಯಾಹ್ನ 3:30: ಪಿಬಿಕೆಎಸ್ vs ಡಿಸಿ, ಮೊಹಾಲಿ.

ಮಾರ್ಚ್ 23- ಸಂಜೆ 7:30: ಕೆಕೆಆರ್ vs ಎಸ್ಆರ್‌ಹೆಚ್, ಕೋಲ್ಕತಾ.

ಮಾರ್ಚ್ 24- ಮಧ್ಯಾಹ್ನ 3:30: ಆರ್‌ಆರ್ vs ಎಲ್ಎಸ್‌ಜಿ, ಜೈಪುರ.

ಮಾರ್ಚ್ 24- ಸಂಜೆ 7:30: ಜಿಟಿ vs ಎಂಐ, ಅಹಮದಾಬಾದ್.

ಮಾರ್ಚ್ 25- ಸಂಜೆ 7:30: ಆರ್‌ಸಿಬಿ vs ಪಿಬಿಕೆಎಸ್, ಬೆಂಗಳೂರು.

ಮಾರ್ಚ್ 26- ಸಂಜೆ 7:30: ಸಿಎಸ್‌ಕೆ vs ಜಿಟಿ, ಚೆನ್ನೈ.

ಮಾರ್ಚ್ 27- ಸಂಜೆ 7:30: ಎಸ್ಆರ್‌ಹೆಚ್ vs ಎಂಐ, ಹೈದರಾಬಾದ್.

ಮಾರ್ಚ್ 28- ಸಂಜೆ 7:30: ಆರ್‌ಆರ್ vs ಡಿಸಿ, ಜೈಪುರ.

ಮಾರ್ಚ್ 29- ಸಂಜೆ 7.30: ಆರ್‌ಸಿಬಿ vs ಕೆಕೆಆರ್, ಬೆಂಗಳೂರು.

ಮಾರ್ಚ್ 30- ಸಂಜೆ 7:30: ಎಲ್ಎಸ್‌ಜಿ vs ಪಿಬಿಕೆಎಸ್, ಲಕ್ನೋ.

ಮಾರ್ಚ್ 31- ಮಧ್ಯಾಹ್ನ 3:30: ಜಿಟಿ vs ಎಸ್ಆರ್‌ಹೆಚ್, ಅಹಮದಾಬಾದ್.

ಮಾರ್ಚ್ 31- ಸಂಜೆ 7:30: ಡಿಸಿ vs ಸಿಎಸ್‌ಕೆ, ವಿಶಾಖಪಟ್ಟಣಂ.

ಏಪ್ರಿಲ್ 1- ಸಂಜೆ 7:30: ಮುಂಬೈ vs ಆರ್‌ಆರ್, ಮುಂಬೈ.

ಏಪ್ರಿಲ್ 2- ಸಂಜೆ 7:30: ಆರ್‌ಸಿಬಿ vs ಎಲ್ಎಸ್‌ಜಿ, ಬೆಂಗಳೂರು.

ಏಪ್ರಿಲ್ 3- ಸಂಜೆ 7:30: ಡಿಸಿ vs ಕೆಕೆಆರ್, ವಿಶಾಖಪಟ್ಟಣಂ.

ಏಪ್ರಿಲ್ 4- ಸಂಜೆ 7:30: ಜಿಟಿ vs ಪಿಬಿಕೆಎಸ್, ಅಹಮದಾಬಾದ್.

ಏಪ್ರಿಲ್ 5- ಸಂಜೆ 7:30: ಎಸ್ಆರ್‌ಎಚ್ vs ಸಿಎಸ್ಕೆ, ಹೈದರಾಬಾದ್.

ಏಪ್ರಿಲ್ 6- ಸಂಜೆ 7:30: ಆರ್‌ಆರ್ vs ಆರ್‌ಸಿಬಿ, ಜೈಪುರ.

ಏಪ್ರಿಲ್ 7- ಮಧ್ಯಾಹ್ನ 3:30: ಮುಂಬೈ vs ಡಿಸಿ.

ಏಪ್ರಿಲ್ 7- ಸಂಜೆ 7:30: ಎಲ್ಎಸ್‌ಜಿ vs ಜಿಟಿ, ಲಕ್ನೋ.

Tags: