Mysore
20
few clouds

Social Media

ಶನಿವಾರ, 31 ಜನವರಿ 2026
Light
Dark

IPL 2024: RCB vs CSK ನಡುವಿನ ಮಹತ್ವದ ಪಂದ್ಯಕ್ಕೆ ಈ ಆರ್‌ಸಿಬಿ ಆಟಗಾರರ ಗೈರು

ಬೆಂಗಳೂರು: ಇದೇ ಮೇ 18 ರಂದು ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿಗೆ ಬಿಗ್‌ ಶಾಕ್‌ ಎದುರಾಗಿದೆ.

ಸತತ ಐದು ಪಂದ್ಯಗಳನ್ನು ಗೆದ್ದು, ಕ್ವಾಲಿಫೈ ಹಂತದಲ್ಲಿರುವ ಆರ್‌ಸಿಬಿ ತಂಡದಿಂದ ಇಂಗ್ಲೆಂಡ್‌ನ ಪ್ರಮುಖ ಆಟಗಾರರು ದೂರವಾಗಿದ್ದಾರೆ. ಇಂಗ್ಲೆಂಡ್‌ನ ವಿಲ್‌ ಜಾಕ್‌ ಮತ್ತು ರೀಸ್‌ ಟಾಪ್ಲಿ ಅವರು ತಮ್ಮ ತವರಿಗೆ ಮರಳಿದ್ದಾರೆ. ಪ್ಲೇಆಫ್‌ನಲ್ಲಿ ಜೀವಂತವಾಗಿರಲು ಆರ್‌ಸಿಬಿ ಸಿಎಸ್‌ಕೆ ನಡುವಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಇನ್ನು ಈ ಪಂದ್ಯದಲ್ಲಿ ಸ್ಟಾರ್‌ ಆಲ್‌ರೌಂಡರ್‌ ವಿಲ್‌ ಜಾಕ್‌ ಅವಶ್ಯಕತೆ ಬಹಳ ಇತ್ತು. ಆದ್ರೆ ಇವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ಇದೇ ಜೂನ್‌ ಒಂದರಿಂದ ಆರಂಭವಾಗುವ ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಇಂಗ್ಲೆಂಡ್‌ ತಂಡದ ವಿಲ್‌ಜಾಕ್‌ ಹಾಗೂ ರೀಸ್‌ ಟಾಪ್ಲಿ ತಮ್ಮ ತವರಿಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಾಕ್ಸ್‌ ಹಾಗೂ ಟಾಪ್ಲಿ ಅವರು ಅಂತರಾಷ್ಟ್ರೀಯ ಪಂದ್ಯಗಳಿಗಾಗಿ ತಮ್ಮ ತವರಿಗೆ ಹಿಂತಿರುಗುತ್ತಿದ್ದಾರೆ. ನಾವು ಅವರಿಗೆ ಶುಭ ಆರೈಸುತ್ತೇವೆ. ಈ ಐಪಿಎಲ್‌ನಲ್ಲಿ ಆರ್‌ಸಿಬಿ ಕ್ಯಾಂಪ್‌ ಹಾಗೂ ಮೈದಾನಗಳಲ್ಲಿ ನಿಮ್ಮ ಪ್ರದರ್ಶನ ಅತ್ಯುತ್ತಮವಾಗಿತ್ತು. ಶೀಘ್ರವೇ ನಿಮ್ಮನ್ನು ಭೇಟಿಯಾಗಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಇಂಗ್ಲೆಂಡ್‌ ಕ್ಯಾಪ್ಟನ್‌ ಜೋಶ್‌ ಬಟ್ಲರ್‌, ಲಿವಿಂಗ್‌ಸ್ಟೋನ್‌ ಹಾಗೂ ಸ್ಯಾಮ್‌ ಕರನ್‌ ಸಹಾ ತಂಡಗಳನ್ನು ತೊರೆದು ತಮ್ಮ ತವರಿಗೆ ಮರಳಿದ್ದಾರೆ ಎನ್ನಲಾಗಿದೆ.

ಆರ್‌ಸಿಬಿ ತಂಡಕ್ಕೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ವಿಲ್‌ ಜಾಕ್‌ ಅವರ ಅನುಪಸ್ಥಿತಿ ತಂಡಕ್ಕೆ ಕಾಡದೇ ಇರಲಾರದು. ಸಿಎಸ್‌ಕೆ ಮೇಲೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Tags:
error: Content is protected !!