Mysore
26
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

IPL-2024: ಡೆಲ್ಲಿ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಪಂಜಾಬ್‌!

ಮೊಹಾಲಿ: ಇಲ್ಲಿನ ಮಹಾರಾಜ ಯದ್ವೀಂದ್ರ ಸಿಂಗ್‌ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹದಿನೇಳನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 4 ವಿಕೆಟ್‌ಗಳ ಅಂತರದ ಗೆಲುವನ್ನು ದಾಖಲಿಸಿ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 174 ರನ್‌ ಕಲೆಹಾಕಿ ಎದುರಾಳಿ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಗೆಲ್ಲಲು 175 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 177 ರನ್‌ ಕಲೆಹಾಕಿತು.

ಡೆಲ್ಲಿ ಇನ್ನಿಂಗ್ಸ್‌: ಡೆಲ್ಲಿ ಪರ ಆರಂಭಿಕರಾಗಿ ಬಂದ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಜೋಡಿ ಉತ್ತಮ ಆಟವಾಡಿದರು. ಮಿಚೆಲ್ ಮಾರ್ಷ್ (20), ಡೇವಿಡ್ ವಾರ್ನರ್ (29) ರನ್‌ ಗಳಿಸಿ ಔಟಾದರು. ಬಳಿಕ ಬಂದ ಶಾಯ್ ಹೋಪ್ (33) ರಬಡಾಗೆ ವಿಕೆಟ್‌ ಒಪ್ಪಿಸಿ ಹೊರನಡೆದರು.

ನಂತರ ಬಂದ ನಾಯಕ ರಿಷಭ್‌ ಪಂತ್‌ (18) ರನ್ ಗಳಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಅಕ್ಷರ್‌ ಪಟೇಲ್‌ (21) ಹಾಗೂ ಕೊನೆಯಲ್ಲಿ ಅಬ್ಬರಿಸಿದ ಅಭಿಷೇಕ್ ಪೊರೆಲ್ 10 ಎಸೆತಗಳಲ್ಲಿ 32 ರನ್ ಗಳಿಸಿ ತಂಡವನ್ನು ಸ್ಪಧಾತ್ಮಕ ಮೊತ್ತದತ್ತ ಕೊಂಡೊಯ್ದರು.

ಪಂಜಾಬ್‌ ಪರ ಹರ್ಷಲ್‌ ಪಟೇಲ್‌ ಮತ್ತು ಅರ್ಶ್‌ದೀಪ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರು.

ಪಂಜಾಬ್‌ ಕಿಂಗ್ಸ್‌ ಇನ್ನಿಂಗ್ಸ್‌: ಸ್ಪರ್ಧಾತ್ಮಕ ಮೊತ್ತ ಚೇಸ್‌ ಮಾಡಲು ಮುಂದಾದ ಪಂಜಾಬ್‌ಗೆ ಆರಂಭಿಕ ಆಘಾತ ಉಂಟಾಯಿತು. ಜಾನಿ ಬೇರ್‌ಸ್ಟೋ ಕೇವಲ (9) ರನ್‌ಗಳಿಸಿ ಮೊದಲ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಬಳಿಕ ಬಂದ ಪ್ರಭ್‌ಸಿಮ್ರಾನ್‌, ನಾಯಕ ಶಿಖರ್‌ ಧವನ್‌ ಜೊತೆ ಇನ್ನಿಂಗ್ಸ್‌ ಕಟ್ಟಿದರು. ಈ ಇಬ್ಬರು ಕ್ರಮವಾಗಿ (26) ಮತ್ತು (22) ರನ್‌ ಬಾರಿಸಿ ಔಟಾದರು.

ನಂತರ ಜೊತೆಯಾದ ಇಂಗ್ಲೆಂಡ್‌ ಆಟಗಾರರಾದ ಸ್ಯಾಮ್‌ ಕರನ್‌ ಹಾಗೂ ದಾಂಡಿಗ ಲಿವಿಂಗ್‌ಸ್ಟೋನ್‌ ತಂಡದ ದಿಕ್ಕನ್ನೇ ಬದಲಿಸಿದರು. ಸ್ಯಾಮ್‌ ಕರನ್‌ 47 ಎಸೆತಗಳನ್ನು ಎದುರಿಸಿ 6 ಬೌಂಡರಿ 1 ಸಿಕ್ಸರ್‌ ಸಹಿತ 63 ರನ್‌ ಕೆಲಹಾಕಿದರು. ಕೊನೆಯಲ್ಲಿ ಅಬ್ಬರಿಸಿದ ಲಿವಿಂಗ್‌ಸ್ಟೋನ್‌ (38), ಕೊನೆಯ ೬ ಎಸೆತಗಳಲ್ಲಿ ನಾಲ್ಕು ರನ್‌ ಬೇಕಾಗಿದ್ದಾಗ ಸುಮಿತ್‌ ಕುಮಾರ್‌ ಎಸೆತವನ್ನು ಲಾಂಗ್‌ ಕಡೆ ಸಿಕ್ಸರ್‌ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಡೆಲ್ಲಿ ಪರ ಕುಲ್ದೀಪ್‌ ಯಾದವ್‌, ಖಲೀಲ್‌ ಅಹ್ಮದ್‌ ತಲಾ ಎರಡು ವಿಕೆಟ್‌ ಕಬಳಿಸಿದರು.

ಪಂದ್ಯ ಶ್ರೇಷ್ಠ: ಸ್ಯಾಮ್‌ ಕರನ್‌

Tags:
error: Content is protected !!