Mysore
16
broken clouds

Social Media

ಗುರುವಾರ, 02 ಜನವರಿ 2025
Light
Dark

IPL 2024: ಮುಂಬೈ ಹೀನಾಯ ಪ್ರದರ್ಶನಕ್ಕೆ ಕಾರಣ ಹೇಳಿದ ನಾಯಕ ಪಾಂಡೆ

ಮುಂಬೈ: 2024ರ ಐಪಿಎಲ್‌ ಸೀಸನ್‌ನಲ್ಲಿ ಈ ಬಾರಿ ಮುಂಬೈ ಇಂಡಿಯನ್ಸ್‌ ತಂಡ ಸೋಲಿಗೆ ಕಳಪೆ ಪ್ರದರ್ಶನವೇ ಕಾರಣವಾಯಿತು ಎಂದು ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಟೂರ್ನಿಯ ಹೀನಾಯ ಪ್ರದರ್ಶನಕ್ಕೆ ನಿಜವಾದ ಕಾರಣವನ್ನು ತಿಳಿಸಿದ್ದಾರೆ.

ಮುಂಬೈ ತಾವಾಡಿದ ಕೊನೆಯ ಪಂದ್ಯದಲ್ಲಿ ಸೋಲುವ ಮೂಲಕ ಈ ಸೀಸನ್‌ನಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮುಂಬೈ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಗೆದ್ದು 10 ಪಂದ್ಯಗಳಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

ಶುಕ್ರವಾರ (ಮೇ.17) ವಾಂಖೆಡೆಯಲ್ಲಿ ನಡೆದ ಮುಂಬೈ ಇಂಡಿಯನ್ಸ್‌-ಲಖನೌ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯದಲ್ಲಿ ಮುಂಬೈ 18 ರನ್‌ಗಳ ಅಂತರದಿಂದ ಸೋಲು ಕಂಡ ಬಳಿಕ ನೀಡಿದ ಸಂದರ್ಶನ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಉತ್ತಮವಾಗಿ ಆಡಲಿಲ್ಲ. ನಾವು ಒಂದು ತಂಡವಾಗಿ ಉತ್ತಮ ಪ್ರದರ್ಶನ ನೀಡದೇ ಇರುವುದು ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಯಿತು. ಇದೊಂದು ಬೇಸರದ ಸಂಗತಿಯಾಗಿದೆ ಎಂದಿದ್ದಾರೆ.

ನಾವು ಅಂಗಳಕ್ಕೆ ಕಾಲಿಟ್ಟ ಬಳಿಕ ಉತ್ತಮವಾದುದ್ದನ್ನೇ ನೀಡಬೇಕು. ನಾವು ಒಂದು ತಂಡವಾಗಿ ಉತ್ತಮ ಆಟ ನೀಡುವಲ್ಲಿ ವಿಫಲವಾದೆವು. ಹುರುಪಿನಿಂದ ಆಡಲಿಲ್ಲ. ಗುಣಮಟ್ಟದ ಕ್ರಿಕೆಟ್‌ ಆಡುವಲ್ಲಿ ನಾವು ಸೋತೆವು ಎಂದು ಸೋಲಿನ ಬಗ್ಗೆ ನಾಯಕ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.

Tags: