Mysore
16
overcast clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

IPL Auction 2024: ಎಲ್ಲಾ 10 ತಂಡಗಳು ಕೈಬಿಟ್ಟ ಆಟಗಾರರ ಸಂಪೂರ್ಣ ಪಟ್ಟಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 17ನೇ ಆವೃತ್ತಿ ಮುಂದಿನ ವರ್ಷದ ಮಾರ್ಚ್ ತಿಂಗಳ ಮಧ್ಯಂತರದಲ್ಲಿ ಶುರುವಾಗಲಿದೆ ಎಂದು ಖ್ಯಾತ ಕ್ರೀಡಾ ವೆಬ್‌ ತಾಣ ಕ್ರಿಕ್‌ಬಜ್‌ ತನ್ನ ವರದಿಯಲ್ಲಿ ತಿಳಿಸಿದೆ. ಇನ್ನು ಈ ಮೆಗಾ ಕ್ರಿಕೆಟ್‌ ಕದನಕ್ಕೆ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದ್ದು ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ಸಹ ನಡೆಯಲಿದೆ. ಈ ಬಾರಿಯ ಆಟಗಾರರ ಹರಾಜು ಪ್ರಕ್ರಿಯೆ ದುಬೈನ ಹವೆನ್‌ ಆಫ್‌ ಎಲೈಟ್ಸ್‌ನಲ್ಲಿ ಡಿಸೆಂಬರ್‌ 19ರಂದು ನಡೆಯಲಿದೆ.

ಇನ್ನು ಈ ಹರಾಜಿಗೂ ಮುನ್ನ ಎಲ್ಲಾ ತಂಡಗಳು ತಮ್ಮ ತಂಡದಲ್ಲಿನ ಆಟಗಾರರನ್ನು ಕೈಬಿಡಲು ನವೆಂಬರ್‌ 26 ಕೊನೆಯ ದಿನಾಂಕ ಎಂದು ಬಿಸಿಸಿಐ ಗಡುವನ್ನೂ ಸಹ ನೀಡಿದೆ. ಹೀಗಾಗಿ ಸದ್ಯ ವಿವಿಧ ತಂಡಗಳು ತಮಗೆ ಯಾವ ಆಟಗಾರರು ಬೇಡವೋ ಅಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹಾಗಿದ್ದರೆ ಈ ಬಾರಿಯ ಹರಾಜಿಗೂ ಮುನ್ನ ವಿವಿಧ ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

1. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಆರ್‌ಸಿಬಿ ಫ್ರಾಂಚೈಸಿ ಕೈಬಿಟ್ಟ ಆಟಗಾರರೆಂದರೆ ಹರ್ಷಲ್‌ ಪಟೇಲ್‌, ದಿನೇಶ್‌ ಕಾರ್ತಿಕ್‌ ಹಾಗೂ ಅನುಜ್‌ ರಾವತ್‌.
2. ಚೆನ್ನೈ ಸೂಪರ್‌ ಕಿಂಗ್ಸ್:‌ ಬೆನ್ ಸ್ಟೋಕ್ಸ್‌
3. ಸನ್‌ ರೈಸರ್ಸ್‌ ಹೈದರಾಬಾದ್:‌ ಹ್ಯಾರಿ ಬ್ರೂಕ್ಸ್‌

4. ಡೆಲ್ಲಿ ಕ್ಯಾಪಿಟಲ್ಸ್‌ : ಪೃಥ್ವಿ ಶಾ ಹಾಗೂ ಮನೀಶ್‌ ಪಾಂಡೆ
5. ರಾಜಸ್ಥಾನ್‌ ರಾಯಲ್ಸ್:‌ ಜೇಸನ್‌ ಹೋಲ್ಡರ್‌, ಕೆಸಿ ಕಾರಿಯಪ್ಪ ಹಾಗೂ ಮುರುಗನ್‌ ಅಶ್ವಿನ್‌.
6. ಗುಜರಾತ್‌ ಟೈಟನ್ಸ್:‌ ದಸುನ್‌ ಶನಕ, ಯಶ್‌ ದಯಾಳ್‌, ಓಡಿಯನ್‌ ಸ್ಮಿತ್‌, ಪ್ರದೀಪ್ ಸಾಂಗ್ವಾನ್‌ ಹಾಗೂ ಉರ್ವಿಲ್‌ ಪಟೇಲ್‌.

7. ಕೊಲ್ಕತ್ತಾ ನೈಟ್‌ ರೈಡರ್ಸ್:‌ ಆಂಡ್ರೆ ರಸೆಲ್‌, ಎನ್‌ ಜಗದೀಶನ್‌, ಲಾಕಿ ಫರ್ಗ್ಯೂಸನ್‌, ಡೇವಿಡ್‌ ವೈಸ್‌ ಹಾಗೂ ಮನ್‌ದೀಪ್‌ ಸಿಂಗ್.
‌8. ಲಕ್ನೋ ಸೂಪರ್‌ಜೈಂಟ್ಸ್: ಮಾರ್ಕಸ್‌ ಸ್ಟೊಯ್ನಿಸ್‌, ಎವಿನ್ ಲೆವಿಸ್‌, ಕೈಲ್‌ ಜೆಮಿಸನ್‌, ಕೆ ಗೌತಮ್‌ ಹಾಗೂ ಏಡನ್‌ ಮಾರ್ಕ್ರಮ್‌
9. ಮುಂಬೈ ಇಂಡಿಯನ್ಸ್: ಜಯದೇವ್ ಉನಾಡ್ಕತ್‌, ಇಶಾನ್‌ ಕಿಶನ್, ಮುರುಗನ್‌ ಅಶ್ವಿನ್‌, ರಿಲೆ ಮೆರೆಡಿತ್‌, ಪಿಯೂಶ್‌ ಚಾವ್ಲಾ ಹಾಗೂ ಸಂದೀಪ್‌ ವಾರಿಯರ್‌.
10. ಪಂಜಾಬ್‌ ಕಿಂಗ್ಸ್:‌ ಹರ್‌ಪ್ರೀತ್‌ ಭಾಟಿಯಾ, ರಿಷಿ ಧವನ್‌, ಭಾನುಕಾ ರಾಜಪಕ್ಸೆ, ಮ್ಯಾಥ್ಯೂ ಶಾರ್ಟ್‌ ಹಾಗೂ ರಾಜ್‌ ಅಂಗದ್‌ ಬಾವಾ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!