Mysore
22
mist

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

IPL 2024: ಆರ್‌ಆರ್‌-ಕೆಕೆಆರ್‌ ಪಂದ್ಯ ರದ್ದು; ಎಲಿಮಿನೇಟರ್‌ನಲ್ಲಿ ಆರ್‌ಸಿಬಿಗೆ ಆರ್‌ಆರ್‌ ಸವಾಲು

ಗುವಾಹಟಿ: ಇಲ್ಲಿನ ಬಾರ್ಸಪರ ಕ್ರಿಡಾಂಗಣದಲ್ಲಿಂದು ನಡೆಯಬೇಕಿದ್ದ ಕೊಲ್ಕತ್ತಾ ನೈಟ್‌ರೈಡರ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಈ ಸೀಸನ್‌ನ ಎಲ್ಲಾ 70 ಪಂದ್ಯಗಳು ಇದರೊಂದಿಗೆ ಮುಕ್ತಾಯಗೊಂಡಿದೆ. ಇನ್ನು ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿ ಕೆಕೆಆರ್‌ ಇದ್ದರೇ, ಎರಡರಲ್ಲಿ ಎಸ್‌ಆರ್‌ಎಚ್‌, ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಕ್ರಮವಾಗಿ ಆರ್‌ಆರ್‌ ಹಾಗೂ ಅರ್‌ಸಿಬಿ ತಂಡಗಳು ಸ್ಥಾನ ಪಡೆದಿವೆ.

ಮೇ.21ರಂದು ಮೊದಲ ಕ್ವಾಲಿಫೈಯರ್‌ ಪಂದ್ಯ ಕೊಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ಸನ್‌ ರೈಸರ್ಸ್‌ ಹೈದರಾಬಾದ್‌ ನಡುವೆ ಅಹ್ಮದಾಬಾದ್‌ನಲ್ಲಿ ನಡೆಲಿದೆ. ಮೇ.22 ರಂದು ಎಲಿಮಿನೇಟರ್‌ ಪಂದ್ಯದಲ್ಲಿ ನಮ್ಮ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸವಾಲೊಡ್ಡಲಿದೆ.

ಈ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದೊಂದಿಗೆ ಮೇ.24 ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ.

ಮೊದಲ ಕ್ವಾಲಿಫೈ ಮತ್ತು ಎರಡನೇ ಕ್ವಾಲಿಫೈನಲ್ಲಿ ಗೆದ್ದ ತಂಡಗಳು ಮೇ.26 ರಂದು ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯ ಆಡಲಿದೆ.

Tags: