Mysore
24
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

IPL 2024: ಎಸ್‌ಆರ್‌ಎಚ್‌ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಕೆಕೆಆರ್‌!

ಅಹ್ಮದಾಬಾದ್‌: ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಜೋಡಿಯ ಭರ್ಜರಿ ಬ್ಯಾಟಿಂಗ್‌ಗೆ ನಲುಗಿದ ಸನ್‌ರೈಸರ್ಸ್‌ ಹೈದರಾಬಾದ್‌ ಹೀನಾಯ ಪ್ರದರ್ಶನ ತೊರುವ ಮೂಲಕ ಕೊಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ 8 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ನಿಗದಿತ 19.3 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 159 ರನ್‌ ಬಾರಿಸಿ, 160 ರನ್‌ಗಳ ಟಾರ್ಗೆಟ್‌ ನೀಡಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೊಲ್ಕತ್ತಾ ಅಯ್ಯರ್‌ ಜೋಡಿಯ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದಿಂದ ಕೇವಲ 13.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 164 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಎಸ್‌ಆರ್‌ಎಚ್‌ ಇನ್ನಿಂಗ್ಸ್‌: ಈ ಸೀಸನ್‌ನ ಮೊದಲ ಕ್ವಾಲಿಫೈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ಗೆ ಆರಂಭಿಕ ಹಿನ್ನಡೆ ಉಂಟಾಯಿತು. ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಸ್ಟಾರ್ಕ್‌ ದಾಳಿಗೆ ಕ್ಲೀನ್‌ ಬೌಲ್ಡ್‌ ಆಗಿ ಸೊನ್ನೆ ಸುತ್ತಿ ಟ್ರಾವಿಸ್‌ ಹೆಡ್‌ ಹೊರ ನಡೆದರು. ಅವರ ಹಿಂದೆಯೇ ಅಭಿಷೇಕ್‌ ಶರ್ಮಾ 3(4) ರನ್‌ ಗಳಿಸಿ ಹೊರಟರು. ನಂತರ ಬಂದ ರಾಹುಲ್‌ ತ್ರಿಪಾಟಿ ತಂಡಕ್ಕೆ ಚೇತರಿಕೆ ಆಟವಾಡಿದರು. ಇವರ ಹೊರತಾಗಿ ಬೇರಾರಿಂದಲೂ ನಿರೀಕ್ಷಿತ ಆಟ ಕಂಡು ಬರಲಿಲ್ಲ. ತ್ರಿಪಾಟಿ 35ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ಸಹಿತ 55 ರನ್‌ ಗಳಿಸಿ ಔಟಾದರು.

ಉಳಿದಂತೆ ನಿತೀಶ್‌ ರೆಡ್ಡಿ 9(10) ರನ್‌, ಷಹಬಾಜ್‌ ಅಹ್ಮದ್‌ ಡಕ್‌ಔಟ್‌, ಕ್ಲಾಸೆನ್‌ 32(21) ರನ್‌, ಅಬ್ದುಲ್‌ ಸಮದ್‌ 16(12) ರನ್‌, ಸನ್ವೀರ್‌ ಸಿಂಗ್‌ ಡಕ್‌ಔಟ್‌, ನಾಯಕ ಕಮಿನ್ಸ್‌ 30(24) ರನ್‌, ಭುವನೇಶ್ವರ್‌ ಡಕ್‌ಔಟ್‌ ಆದರೇ, ವಿಯಸ್ಕಾಂತ್‌ ಔಟಾಗದೇ 7(5) ರನ್‌ ಬಾರಿಸಿದರು.

ಕೊಲ್ಕತ್ತಾ ನೈಟ್‌ರೈಡರ್ಸ್‌ ಪರವಾಗಿ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌, ವರುಣ್‌ ಚಕ್ರವರ್ತಿ 2 ವಿಕೆಟ್‌, ವೈಭವ್‌ ಅರೋರಾ, ಹರ್ಷಿತ್‌ ರಾಣಾ, ಸುನೀಲ್‌ ನರೈನ್‌ ಹಾಗೂ ರಸೆಲ್‌ ತಲಾ ಒಂದೊಂದು ವಿಕೆಟ್‌ ಪಡೆದು ಗಮನ ಸೆಳೆದರು.

ಕೊಲ್ಕತ್ತಾ ಇನ್ನಿಂಗ್ಸ್‌: ಇತ್ತ ಹೈದರಾಬಾದ್‌ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೊಲ್ಕತ್ತಾ ತಂಡಕ್ಕೆ ಅಯ್ಯರ್‌ ಜೋಡಿ ಭದ್ರ ಬುನಾದಿ ಹಾಕಿದರು. ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಔಟಾಗದೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೆಕೆಆರ್‌ ಕೇವಲ 2 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ನಾಯಕ ಶ್ರೇಯಸ್‌ 24 ಎಸೆತಗಳಲ್ಲಿ 5ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 58 ರನ್‌ ಬಾರಿಸಿದರೇ, ವೆಂಕಟೇಶ್‌ ಅಯ್ಯರ್‌ 28ಎಸೆತಗಳಲ್ಲಿ 5 ಬೌಂಡರಿ 4 ಸಿಕ್ಸರ್‌ ಸೇರಿದಂತೆ 51 ರನ್‌ ಬಾರಿಸಿದರು. ಉಳಿದಂತೆ ರೆಹಮನ್ನುಲ್ಲಾ ಗುರ್ಬಾಜ್‌ 23(14) ರನ್‌ ಮತ್ತು ಸುನೀಲ್‌ ನರೈನ್‌ 21(16) ರನ್‌ ಕಲೆಹಾಕಿದರು.

ಹೈದರಾಬಾದ್‌ ಪರ ನಟರಾಜನ್‌ ಹಾಗೂ ನಾಯಕ ಕಮಿನ್ಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡ ನೇರವಾಗಿ ಫೈನಲ್‌ ತಲುಪಿತು. ಇನ್ನು ನಾಳೆ ನಡೆಯುವ ಆರ್‌ಸಿಬಿ ಹಾಗೂ ರಾಜಸ್ಥಾನ್‌ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎಸ್‌ಆರ್‌ಎಚ್‌ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಎದುರಿಸಲಿದೆ.

Tags:
error: Content is protected !!