Mysore
14
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

IPL 2024: ಗುಜರಾತ್‌ ಬೌಲಿಂಗ್‌ ದಾಳಿಗೆ ಶರಣಾದ ಚೆನ್ನೈ ಸೂಪರ್‌ ಕಿಂಗ್ಸ್

ಅಹ್ಮದಾಬಾದ್:‌ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್‌ನ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಗುಜರಾತ್‌ ಟೈಟನ್ಸ್‌ 35 ರನ್‌ಗಳ ಗೆಲುವನ್ನು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಫೀಲ್ಡಿಂಗ್‌ ಆರಿಸಿಕೊಂಡು ಗುಜರಾತ್‌ ಟೈಟನ್ಸ್‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟನ್ಸ್‌ ಸಾಯಿ ಸುದರ್ಶನ್‌ ಮತ್ತು ಶುಭ್‌ಮನ್ ಗಿಲ್‌ ಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 231 ರನ್‌ ಕಲೆಹಾಕಿ 232 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗುಜರಾತ್‌ ಟೈಟನ್ಸ್‌ ಬೌಲಿಂಗ್‌ ದಾಳಿಗೆ ಮಂಕಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು.

ಗುಜರಾತ್‌ ಟೈಟನ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಾಯಿ ಸುದರ್ಶನ್‌ ಹಾಗೂ ನಾಯಕ ಶುಭ್‌ಮನ್ ಗಿಲ್‌ 17.2 ಓವರ್‌ಗಳಲ್ಲಿ 210 ರನ್‌ಗಳ ಜತೆಯಾಟವನ್ನಾಡಿದರು. ಸಾಯಿ ಸುದರ್ಶನ್‌ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್‌ ಸಹಿತ 103 ರನ್‌ ಗಳಿಸಿದರೆ, ಶುಭ್‌ಮನ್‌ ಗಿಲ್‌ ‌55 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 104 ರನ್‌ ಗಳಿಸಿದರು. ಇನ್ನುಳಿದಂತೆ ಶಾರುಖ್‌ ಖಾನ್‌ 2 (3) ರನ್‌ ಮತ್ತು ಡೇವಿಡ್‌ ಮಿಲ್ಲರ್‌ ಅಜೇಯ 16 (11) ರನ್‌ ಬಾರಿಸಿದರು.

ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತುಷಾರ್‌ ದೇಶಪಾಂಡೆ 2 ವಿಕೆಟ್‌ ಪಡೆದರು.

ಚೆನ್ನೈ ಸೂಪರ್‌ ಕಿಂಗ್ಸ್‌ ಇನ್ನಿಂಗ್ಸ್: ಚೆನ್ನೈ ಟಾಪ್‌ ಆರ್ಡರ್‌ ವಿಫಲತೆಯಿಂದ 10 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತು. ಆರಂಭಿಕರಾದ ಅಜಿಂಕ್ಯ ರಹಾನೆ 1 (5) ರನ್‌ ಮತ್ತು ರಚಿನ್‌ ರವೀಂದ್ರ 1 (2) ರನ್‌ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರುತುರಾಜ್‌ ಗಾಯಕ್ವಾಡ್‌ ಡಕ್‌ಔಟ್‌ ಆದರು. ಈ ಸಂದರ್ಭದಲ್ಲಿ ನಾಲ್ಕನೇ ವಿಕೆಟ್‌ಗೆ ಜತೆಯಾದ ಡೆರಿಲ್‌ ಮಿಚೆಲ್‌ ಮತ್ತು ಮೊಯಿನ್‌ ಅಲಿ 109 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು. ಡೆರಿಲ್‌ ಮಿಚೆಲ್‌ 63 (34) ರನ್‌ ಗಳಿಸಿದರೆ, ಮೊಯಿನ್‌ ಅಲಿ 56 (36) ರನ್‌ ಬಾರಿಸಿದರು. ಆದರೆ ಬಳಿಕ ಕಣಕ್ಕಿಳಿದ ಯಾರೂ ಸಹ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಇನ್ನಿಂಗ್ಸ್‌ ಆಡಲಿಲ್ಲ. ಶಿವಮ್‌ ದುಬೆ 21 (13) ರನ್‌, ರವೀಂದ್ರ ಜಡೇಜಾ 18 (10) ರನ್‌, ಮಿಚೆಲ್‌ ಸ್ಯಾಂಟ್ನರ್‌ ಡಕ್‌ಔಟ್‌, ಶಾರ್ದೂಲ್‌ ಠಾಕೂರ್‌ ‌ಅಜೇಯ 3 (4) ರನ್‌ ಮತ್ತು ಎಂಎಸ್‌ ಧೋನಿ ಅಜೇಯ 26 (11) ರನ್‌ ಗಳಿಸಿದರು.

ಗುಜರಾತ್‌ ಟೈಟನ್ಸ್ ಪರ ಮೋಹಿತ್‌ ಶರ್ಮಾ 3 ವಿಕೆಟ್‌, ರಶೀದ್‌ ಖಾನ್ 2 ವಿಕೆಟ್‌, ಸಂದೀಪ್‌ ವಾರಿಯರ್‌ ಮತ್ತು ಉಮೇಶ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:
error: Content is protected !!