Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

IPL 2024: ಪಂಜಾಬ್‌ ವಿರುದ್ಧ ಆರ್‌ಆರ್‌ಗೆ ರೋಚಕ ಜಯ!

ಮುಲ್ಲನಪುರ: ಇಲ್ಲಿನ ವೈಎಸ್‌ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಸೀಸನ್‌ 17ರ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್‌ 3 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್‌ಗಳ ಕಲೆಹಾಕಿ ರಾಜಸ್ಥಾನ್‌ಗೆ 148ರನ್‌ಗಳ ಗುರಿ ನೀಡಿತು. ಈ ಸ್ಫರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಆರ್‌ 19.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 152ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಪಂಜಾಬ್‌ ಇನ್ನಿಂಗ್ಸ್‌: ಪಂಜಾಬ್‌ಗೆ ಈ ಪಂದ್ಯದಲ್ಲಿಯೂ ನಿರೀಕ್ಷಿತ ಆರಂಭ ಕಂಡು ಬರಲಿಲ್ಲ. ಆರಂಭಿಕರಾದ ಬೇರ್‌ಸ್ಟೋ ಹಾಗೂ ಅಥರ್ವಾ ತಲಾ 15ರನ್‌ ಗಳಿಸಿ ಔಟಾದರು, ತಂಡದ ಇತರೇ ಆಟಗಾರರಿಂದ ನಿರೀಕ್ಷಿತ ಆಟ ಕಂಡು ಬರಲಿಲ್ಲ. ಅಶುತೋಷ್ 31ರನ್‌ ಬಾರಿಸಿದ್ದೇ ತಂಡದ ಪರ ಗರಿಷ್ಠ ಮೊತ್ತ. ಉಳಿದಂತೆ ಪ್ರಭ್‌ಸಿಮ್ರಾನ್‌ 10, ನಾಯಕ್‌ ಕರನ್‌ 6, ಶಶಾಂಕ್‌ ಸಿಂಗ್‌ 9, ಲಿವಿಂಗ್‌ಸ್ಟೋನ್‌ 21, ಬ್ರಾರ್‌ 3ರನ್‌ ಗಳಿಸಿದರೇ, ಜಿತೇಶ್ 29 ರನ್‌ಗಳಿಸಿ ಗಮನ ಸೆಳೆದರು.

ರಾಯಲ್ ಪರ ಅವೇಶ್ ಖಾನ್ ಹಾಗೂ ಕೇಶವ್‌ ಮಹಾರಾಜ್ ತಲಾ 2 ವಿಕೆಟ್ ಪಡೆದರು. ಚಹಾಲ್‌, ಕುಲ್ದೀಪ್‌ ಸೇನ್‌ ಹಾಗೂ ಬೋಲ್ಟ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಆರ್‌ಆರ್‌ ಇನ್ನಿಂಗ್ಸ್‌: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಆರ್‌ಗೆ ಜೈಸ್ವಾಲ್‌ ಉತ್ತಮ ಆರಂಭ ನೀಡಿದರು. ಇವರು 28 ಎಸೆತಗಳಲ್ಲಿ 4 ಬೌಂಡರಿ ಸಹಿತ 39 ರನ್‌ ಬಾರಿಸಿ ಔಟಾದರು. ಕೋಟ್ಯಾನ್‌ 24, ನಾಯಕ ಸ್ಯಾಮ್ಸನ್‌ 18, ರಿಯಾನ್‌ ಪರಾಗ್‌ 23, ದೃವ್‌ ಜುರೆಲ್‌ 6, ಬಿಗ್‌ ಹಿಟರ್‌ ರೋಮನ್‌ ಪೋವೆಲ್‌ 11 ರನ್‌ ಗಳಿಸಿ ನಿರ್ಗಮಿಸಿದರು.

ಕೊನೆಯಲ್ಲಿ ಅಬ್ಬರಿಸಿದ ಹೆಟ್ಮಯರ್‌ ಕೇವಲ 10 ಎಸೆತಗಳಲ್ಲಿ 1ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 27 ರನ್‌ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪಂಜಾಬ್‌ ಕಿಂಗ್ಸ್‌ ಪರ ರಬಾಡ ಹಾಗೂ ಸ್ಯಾಮ್‌ ಕರನ್‌ 2 ವಿಕೆಟ್‌, ಹರ್ಷ್‌ದೀಪ್‌ ಸಿಂಗ್‌, ಲಿವಿಂಗ್‌ಸ್ಟೋನ್‌ ಮತ್ತು ಹರ್ಷಲ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:
error: Content is protected !!