Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

IPL-2024: ಸಿಎಸ್‌ಕೆ-ಆರ್‌ಸಿಬಿ ಮುಖಾಮುಖಿ: ಈವರೆಗಿನ ದಾಖಲೆಗಳ ಮಾಹಿತಿ!

ಚೆನ್ನೈ: ಇಂದಿನಿಂದ ಚುಟುಕು ಕ್ರಿಕೆಟ್‌ಗೆ ಅಧಿಕೃತ ಚಾಲನೆ ದೊರೆಯಲಿದೆ. ಐಪಿಎಲ್ 2024ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಕಣಕ್ಕಿಳಿಯುತ್ತಿವೆ. ಹಾಲಿ ಚಾಂಪಿಯನ್‌ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿ ಆಗಲಿವೆ.

ಇತ್ತಂಡಗಳ ಈವರೆಗಿನ ಮುಖಾಮುಖಿಯಲ್ಲಿ ಯಾರ ಕೈ ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳ ನಡುವೆ ಯಾವೆಲ್ಲಾ ದಾಖಲೆಗಳು ನಿರ್ಮಾಣಗೊಂಡಿವೆ, ಮುಂದೆ ಯಾವೆಲ್ಲಾ ದಾಖಲೆಗಳು ನಿರ್ಮಾಣಗೊಳ್ಳಲಿದೆ ಎಂಬುದರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ!

ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಚೆಪಾಕ್‌ ಅಂಗಳದಲ್ಲಿ ಈವರೆಗೆ 8 ಬಾರಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 7ರಲ್ಲಿ ಗೆದ್ದರೇ, ಆರ್‌ಸಿಬಿ 1 ಪಂದ್ಯ ಮಾತ್ರ ಗೆದ್ದಿದೆ.

ಉಭಯ ತಂಡಗಳು ಈವರೆಗೆ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 20 ಮತ್ತು ಆರ್‌ಸಿಬಿ 10 ಪಂದ್ಯಗಳನ್ನು ಗೆದ್ದಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸಿಎಸ್‌ಕೆ ತಂಡಗಳು ಒಂದು ಬಾರಿ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಅದರಲ್ಲಿ ಸಿಎಸ್‌ಕೆ 58 ರನ್‌ಗಳಿಂದ ಗೆದ್ದಿದೆ.

ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪರಸ್ಪರ ಮುಖಾಮುಖಿಯಲ್ಲಿ ಅಧಿಕ ರನ್‌ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ ಬರೋಬ್ಬರಿ 999 ರನ್ ಗಳಿಸಿದ್ದಾರೆ. ಅವರು ಇನ್ನು 1 ರನ್ ಗಳಿಸಿದರೆ, ತಂಡದ ವಿರುದ್ಧ 1000 ರನ್ ಮೈಲಿಗಲ್ಲು ತಲುಪಲಿದ್ದಾರೆ.

ಇದೇ ವೇಳೆ ರವೀಂದ್ರ ಜಡೇಜಾ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಮೊದಲಿಗರಿದ್ದಾರೆ. ಒಟ್ಟು 18 ವಿಕೆಟ್‌ಗಳನ್ನು ಪಡೆದಿರುವ ಜಡ್ಡು, ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಶಿವಂ ದುಬೆ ಅಜೇಯ 95 ರನ್ ಗಳಿಸುವ ಮೂಲಕ, ಉಭಯ ತಂಡಗಳ ಮುಖಾಮುಖಿಯೊಂದರಲ್ಲಿ ಗರಿಷ್ಠ ರನ್‌ ಗಳಿಸಿದ ರೆಕಾರ್ಡ್‌ ಹೊಂದಿದ್ದಾರೆ.

 

Tags: