ಇಂದು ( ಡಿಸೆಂಬರ್ 19 ) ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಐಪಿಎಲ್ ಇತಿಹಾಸದಲ್ಲಿಯೇ ಯಾವ ಆಟಗಾರರೂ ಸಹ ಖರೀದಿಯಾಗದಿದ್ದ ದಾಖಲೆ ಬೆಲೆಗೆ ಈ ಬಾರಿ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬಿಕರಿಯಾಗಿದ್ದಾರೆ.
ಮೊದಲಿಗೆ ಪ್ಯಾಟ್ ಕಮಿನ್ಸ್ ಬರೋಬ್ಬರಿ 20.5 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ದಾಖಲೆ ಬರೆದರೆ, ಬಳಿಕ ಮಿಚೆಲ್ ಸ್ಟಾರ್ಕ್ 24.75 ಕೋಟಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಗುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಈ ಬಾರಿಯ ಹರಾಜಿನಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ಟಾಪ್ 5 ಪಟ್ಟಿ ಇಲ್ಲಿದೆ..
ಮಿಚೆಲ್ ಸ್ಟಾರ್ಕ್ – 24.75 ಕೋಟಿ – ಕೊಲ್ಕತ್ತಾ ನೈಟ್ ರೈಡರ್ಸ್
ಪ್ಯಾಟ್ ಕಮಿನ್ಸ್ – 20.5 ಕೋಟಿ – ಸನ್‌ರೈಸರ್ಸ್ ಹೈದರಾಬಾದ್
ಡೇರಿಲ್ ಮಿಚೆಲ್ – 14 ಕೋಟಿ – ಚೆನ್ನೈ ಸೂಪರ್ ಕಿಂಗ್ಸ್
ಹರ್ಷಲ್ ಪಟೇಲ್ – 11.75 ಕೋಟಿ – ಪಂಜಾಬ್ ಕಿಂಗ್ಸ್
ಅಲ್ಜಾರಿ ಜೋಸೆಫ್ – 11.5 ಕೋಟಿ – ರಾಯಲ್ ಚಾಲೆಂಜರ್ಸ್ ಬೆಂಗಳೂರು





