ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಟೂರ್ನಿಯೊಂದು ಅಮೇರಿಕಾದಲ್ಲಿ ಆಯೋಜನೆಯಾಗುತ್ತಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನು ಇದೇ ಮೊದಲ ಬಾರಿಗೆ ಅಮೇರಿಕಾ ನಡೆಸುತ್ತಿದ್ದು, ಒಂದು ತಿಂಗಳ ಕಾಲ ನಡೆಯುವ ಈ ಟೂರ್ನಿಗೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ.
ವಿಶ್ವಕಪ್ ಎಂದಾಕ್ಷಣ ನಮಗೆ ಮೊದಲಿಗೆ ನೆನೆಪಿಗೆ ಬರುವುದು ಪಂದ್ಯ ಗೆದ್ದವರು, ಸೋತವರು, ಟೂರ್ನಿಯಲ್ಲಿ ಹೆಚ್ಚು ರನ್, ಹೆಚ್ಚಿನ ವಿಕೆಟ್, ಸರಣಿ ಶ್ರೇಷ್ಠ ಹೀಗೆ ಹಲವಾರು ವಿಷಯಗಳು. ಇವುಗಳೆಲ್ಲದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈವರೆಗೆ ವಿಶ್ವಕಪ್ ಗೆದ್ದ ತಂಡಗಳಾವುವು?
ಪ್ರಸಕ್ತ 9 ನೇ ವಿಶ್ವಕಪ್ ಟೂರ್ನಿ ಇದಾಗಿದ್ದು, ಇದರಲ್ಲಿ ಅತಿಹೆಚ್ಚು ಬಾರಿ ವಿಶ್ವಕಪ್ ಗೆದ್ದು, ಇವುಗಳೆಲ್ಲದರ ನಡುವೆ ಪಾರುಪತ್ಯ ಮೆರೆದಿರುವ ತಂಡಗಳೆಂದರೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್. ಮೊದಲ ಬಾರಿಗೆ ನಡೆದ ಚುಟುಕು ಸಮರವನ್ನು ಎಂ.ಎಸ್ ಧೋನಿ ನೇತೃತ್ವದ ಟೀಂ ಇಂಡಿಯಾ ಮೊಲದ ಬಾರಿಗೆ ಬದ್ಧ ವೈರಿ ಪಾಕಿಸ್ತಾನವನ್ನು ಮಣಿಸಿ ಕಪ್ ಎತ್ತಿ ಹಿಡಿದಿತ್ತು.
ಈ ಹಿಂದಿನ ಅವಧಿಯಲ್ಲಿ ಕಪ್ ಗೆದ್ದ ತಂಡಗಳಿವು.
1. ಭಾರತ (2007, ಪಾಕಿಸ್ತಾನ ವಿರುದ್ಧ)
2. ಪಾಕಿಸ್ತಾನ್ (2009, ಶ್ರೀಲಂಕಾ ವಿರುದ್ಧ)
3. ಇಂಗ್ಲೆಂಡ್ (2010, ಆಸ್ಟ್ರೇಲಿಯಾ ವಿರುದ್ಧ)
4. ವೆಸ್ಟ್ ಇಂಡೀಸ್ (2012, ಶ್ರೀಲಂಕಾ ವಿರುದ್ಧ)
5. ಶ್ರೀಲಂಕಾ (2014, ಭಾರತ ವಿರುದ್ಧ)
6. ವೆಸ್ಟ್ ಇಂಡೀಸ್ (2016, ಇಂಗ್ಲೆಂಡ್)
7. ಆಸ್ಟ್ರೇಲಿಯಾ (2021, ನ್ಯೂಜಿಲೆಂಡ್ಸ್ ವಿರುದ್ಧ)
8. ಇಂಗ್ಲೆಂಡ್ (2022, ಪಾಕಿಸ್ತಾನ ವಿರುದ್ಧ)
ಈ ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರಿವರು! : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದವರು. ಏಕದಿನ ವಿಶ್ವಕಪ್‌ನಲ್ಲಿ ಈವರೆಗೆ ಅತಿಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಟಾಪ್ ಮೂರರಲ್ಲಿ ಸ್ಥಾನ ಪಡೆದಿರುವ ಅವರು, ಚುಟುಕು ಸಮರದಲ್ಲಿ ಮೊದಲನೇ ಸ್ಥಾನ ಪಡೆದು ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಕೊಹ್ಲಿ ವೈಯಕ್ತಿಕವಾಗಿ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಸಾವಿರಕ್ಕೂ ಅಧಿಕ ರನ್ ಬಾರಿಸಿ ಮೊದಲಿಗರಾಗಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ಗೇಲ್, ರೋಹಿತ್ ಶರ್ಮಾ ಅವರು ಸಹ ಸ್ಥಾನ ಪಡೆದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಟಾಪ್ 5 ಬ್ಯಾಟರ್ಸ್.
1. ವಿರಾಟ್ ಕೊಹ್ಲಿ (ಭಾರತ) 1141 ರನ್
2. ಮಹೇಲಾ ಜಯವರ್ಧನೆ (ಶ್ರೀಲಂಕಾ) 1016 ರನ್
3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) 965 ರನ್
4. ರೋಹಿತ್ ಶರ್ಮಾ (ಭಾರತ) 963 ರನ್
5. ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ) 897 ರನ್
ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದವರಾರು: ಚುಟುಕು ವಿಶ್ವಕಪ್‌ನಲ್ಲಿ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದರೇ, ಬೌಲಿಂಗ್‌ನಲ್ಲಿ ಈವರೆಗೆ ನಿರೀಕ್ಷಿತ ಸಾಧನೆ ಮಾಡಿಲ್ಲ. ಟೀಂ ಇಂಡಿಯಾದ ಯಾವೊಬ್ಬ ಆಟಗಾರನು ಸಹಾ ಬೌಲಿಂಗ್‌ನಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆದಿಲ್ಲ.
ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ಸ್
1. ಶಕೀಬ್ ಹಲ್-ಹಸನ್ (ಬಾಂಗ್ಲಾದೇಶ) 47 ವಿಕೆಟ್
2. ಶಾಹೀದ್ ಅಫ್ರಿದಿ (ಪಾಕಿಸ್ತಾನ್) 39 ವಿಕೆಟ್
3. ಲಸಿತ್ ಮಲಿಂಗಾ (ಶ್ರೀಲಂಕಾ) 38 ವಿಕೆಟ್
4. ಸಾಹಿದ್ ಅಜ್ಮಲ್ (ಪಾಕಿಸ್ತಾನ್) 36 ವಿಕೆಟ್
5. ಅಜಂತಾ ಮೆಂಡೀಸ್ (ಶ್ರೀಲಂಕಾ) ಹಾಗೂ ಉಮರ್ ಗುಲ್ (ಪಾಕಿಸ್ತಾನ್) ಜಂಟಿಯಾಗಿ 35 ವಿಕೆಟ್
ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರಿವರು:
1. ಶಾಹೀದ್ ಅಫ್ರಿದಿ (2007, ಪಾಕಿಸ್ತಾನ)
2. ತಿಲಕರತ್ನೆ ದಿಲ್ಶಾನ್ (2009, ಶ್ರೀಲಂಕಾ)
3. ಕೆವಿನ್ ಪೀಟರ್‌ಸನ್ (2010, ಇಂಗ್ಲೆಂಡ್)
4. ಶೇನ್ ವ್ಯಾಟ್ಸನ್ (2012, ಆಸ್ಟ್ರೇಲಿಯಾ)
5. ವಿರಾಟ್ ಕೊಹ್ಲಿ (2014, ಭಾರತ)
6. ವಿರಾಟ್ ಕೊಹ್ಲಿ (2016, ಭಾರತ)
7. ಮಿಚೆಲ್ ಮಾರ್ಷ್ (2021, ಆಸ್ಟ್ರೇಲಿಯಾ)
8. ಸ್ಯಾಮ್ ಕರನ್( 2022, ಇಂಗ್ಲೆಂಡ್,
ಟಿ20 ವಿಶ್ವಕಪ್‌ನ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಟಗಾರರಿವರು:
1. ಮ್ಯಾಥ್ಯೂ ಹೈಡೆನ್ (2007, ಆಸ್ಟ್ರೇಲಿಯಾ)
2. ತಿಲಕರತ್ನೆ ದಿಲ್ಶಾನ್ (2009, ಶ್ರೀಲಂಕಾ)
3. ಮಹೇಲಾ ಜಯವರ್ಧನೆ (2010, ಶ್ರೀಲಂಕಾ)
4. ಶೇನ್ ವ್ಯಾಟ್ಸನ್ (2012, ಆಸ್ಟ್ರೇಲಿಯಾ)
5. ವಿರಾಟ್ ಕೊಹ್ಲಿ (2014, ಭಾರತ)
6. ತಮೀಮ್ ಇಕ್ಬಾಲ್ (2016, ಬಾಂಗ್ಲಾದೇಶ)
7. ಬಾಬರ್ ಅಜಂ (2021, ಪಾಕಿಸ್ತಾನ)
8. ವಿರಾಟ್ ಕೊಹ್ಲಿ (2022, ಭಾರತ)
ವಿಶೇಷ: ಕಳೆದ 8 ಸೀಸನ್ ವಿಶ್ವಕಪ್ ಆಡಿರುವ ಇಬ್ಬರು ಆಟಗಾರರು ಈ ಬಾರಿಯ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ಆಟಗಾರರು ಏಷ್ಯಾ ಖಂಡಕ್ಕೆ ಸೇರಿದವರಾಗಿದ್ದಾರೆ. ಮತ್ತು ಅತಿಹೆಚ್ಚು ವಿಶ್ವಕಪ್ ಆಡಿದ ಆಟಗಾರರು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಕಪ್ತಾನ್ ರೋಹಿತ್ ಶರ್ಮಾ ಹಾಗೂ ಬಾಂಗ್ಲಾದೇಶದ ಶಕೀಬ್ ಹಲ್-ಹಸನ್ ಅವರು ಕಳೆದ 8 ಸೀಸನ್‌ಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದು, ಈ ಇಬ್ಬರು ಆಟಗಾರರಿಗೆ ಇದು 9ನೇ ಟೂರ್ನಿಯಾಗಿದೆ.