Mysore
26
scattered clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಬಾಜ್’ಬಾಲ್ ಗೆ ಭಾರತದ ಹೊಸ ಅಸ್ತ್ರ: ದಾಖಲೆ ಬರೆದ ಟೀಂ ಇಂಡಿಯಾ

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಟೀಂ ಇಂಡಿಯಾ ಹೊಸ ಬ್ಯಾಟಿಂಗ್ ದಾಖಲೆ ಬರೆದಿದೆ.

ಎರಡನೇ ಇನ್ನಿಂಗ್ಸ್ ನಲ್ಲಿ ವೇಗವಾಗಿ ಬ್ಯಾಟಿಂಗ್ ಬೀಸಿದ ಭಾರತ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ನೂತನ ಸಾಧನೆ ಮಾಡಿದೆ.ಕನಿಷ್ಠ 20 ಓವರ್‌ ಗಳ ಟೆಸ್ಟ್ ಇನ್ನಿಂಗ್ಸ್‌ ನಲ್ಲಿ ಅತಿ ಹೆಚ್ಚು ತಂಡದ ರನ್-ರೇಟ್ ಹೊಂದಿರುವ ತಂಡ ಎಂಬ ದಾಖಲೆಗೆ ಟೀಂ ಇಂಡಿಯಾ ಪಾತ್ರವಾಯಿತು.

ಕನಿಷ್ಠ 20 ಓವರ್‌ ಗಳ ಟೆಸ್ಟ್ ಇನ್ನಿಂಗ್ಸ್‌ ನಲ್ಲಿ ಅತಿ ಹೆಚ್ಚು ತಂಡದ ರನ್-ರೇಟ್ ಹೊಂದಿರುವ ತಂಡ ಎಂಬ ದಾಖಲೆಗೆ ಟೀಂ ಇಂಡಿಯಾ ಪಾತ್ರವಾಯಿತು.

ಆಕ್ರಮಣಕಾರಿ ಆಟದಿಂದ ಹೊಸ ‘ಬಾಜ್‌ಬಾಲ್’ ಕ್ರಿಕೆಟ್ ಆರಂಭಿಸಿರುವ ಇಂಗ್ಲೆಂಡ್ ಸದ್ಯ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದ್ದರೆ, ಭಾರತೀಯ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ‘ದ್ರಾವ್‌ಬಾಲ್’ ನ ಮೊದಲ ಪ್ರದರ್ಶನ ಭಾರತೀಯ ಕ್ರಿಕೆಟ್ ಗೆ ಹೊಸ ಸಾಧ್ಯತೆಗಳನ್ನು ತೆರೆದಿದೆ.

ಎರಡನೇ ಇನ್ನಿಂಗ್ಸ್ ಆಟವನ್ನು ಟಿ20 ಮಾದರಿಯಲ್ಲಿ ಆಡಲಾರಂಭಿಸಿದ ಟೀಂ ಇಂಡಿಯಾ ಕೇವಲ 24 ಓವರ್ ಗಳಲ್ಲಿ 181 ರನ್ ಕಲೆಹಾಕಿ ಡಿಕ್ಲೇರ್ ಮಾಡಿತು. ಭಾರತವು 7.54 ರನ್ ರೇಟ್‌ ನಲ್ಲಿ ರನ್‌ ಗಳನ್ನು ಗಳಿಸಿತು. ಕನಿಷ್ಠ 20 ಓವರ್‌ ಗಳ ಇನ್ನಿಂಗ್ಸ್‌ ನಲ್ಲಿ ತಂಡವೊಂದು ಟೆಸ್ಟ್‌ ನಲ್ಲಿ ಗರಿಷ್ಠ ಮೊತ್ತವಾಗಿದೆ.

ಈ ವೇಳೆ ಭಾರತವು 2017 ರಲ್ಲಿ ಸಿಡ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 32 ಓವರ್‌ ಗಳಲ್ಲಿ 241/2 ಗಳಿಸಿದ್ದ ಆಸ್ಟ್ರೇಲಿಯಾದ ದಾಖಲೆಯನ್ನು ಮುರಿದರು. ಆಸೀಸ್ ಈ ರನ್‌ ಗಳನ್ನು 7.53 ರನ್ ರೇಟ್‌ನಲ್ಲಿ ಗಳಿಸಿತ್ತು.

ಗಮನಾರ್ಹವೆಂದರೆ, ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ ಶತಕ ಗಳಿಸಿತು. ಮೊದಲ ವಿಕೆಟ್ ಗೆ ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕೇವಲ 71 ಎಸೆತಗಳಲ್ಲಿ 98 ರನ್ ಗಳಿಸಿದರು. ರೋಹಿತ್ ಔಟಾದ ನಂತರ ಭಾರತ ಕೇವಲ 12.2 ಓವರ್‌ಗಳಲ್ಲಿ 100 ರನ್‌ಗಳ ಗಡಿಯನ್ನು ತಲುಪಿತು, ಅಂದರೆ ಒಟ್ಟು 74 ಎಸೆತಗಳಲ್ಲಿ.

ಯಶಸ್ವಿ ಜೈಸ್ವಾಲ್ 38 ರನ್, ನಾಯಕ ರೋಹಿತ್ 57 ರನ್ ಮಾಡಿದರು. ಶುಭ್ಮನ್ ಗಿಲ್ 29 ರನ್ ಮತ್ತು ಇಶಾನ್ ಕಿಶನ್ ಕೇವಲ 34 ಎಸೆತದಲ್ಲಿ ಅಜೇಯ 52 ರನ್ ಮಾಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!