Mysore
25
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

ಪಾಚೆಫ್‌ಸ್ಟ್ರೂಮ್‌: ಅಜೇಯ ಇಂಗ್ಲೆಂಡ್‌ ತಂಡದ ವಿರುದ್ಧ 7 ವಿಕೆಟ್‌ಗಳ ಸಾಧಿಸಿದ ಭಾರತದ ಮಹಿಳೆಯರು  ಚೊಚ್ಚಲ ಅಂಡರ್-19‌ ಟಿ 20 ವಿಶ್ವಕಪ್‌ (U19 T20) ಜಯಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಗೆಲ್ಲಲು 69 ರನ್‌ಗಳ ಗುರಿಯನ್ನು ಪಡೆದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 69 ರನ್‌ ಹೊಡೆಯುವ ಮೂಲಕ ವಿಶ್ವಕಪ್‌ ಗೆದ್ದುಕೊಂಡಿತು.

ಭಾರತದ ಪರ ಶಫಾಲಿ ವರ್ಮಾ 15 ರನ್‌, ಸೌಮ್ಯ ತಿವಾರಿ ಔಟಗದೇ 24 ರನ್, ಗೊಂಗಡಿ ತಿಷಾ 24 ರನ್‌ ಹೊಡೆದರು.

ಅತ್ಯುತ್ತಮ ಬೌಲಿಂಗ್‌ ಮಾಡಿದ ಭಾರತ 17.1 ಓವರ್‌ಗಳಲ್ಲಿ 68 ರನ್‌ಗಳಿಗೆ ಇಂಗ್ಲೆಂಡ್‌  ತಂಡವನ್ನು ಆಲೌಟ್‌ ಮಾಡಿತು. ಭಾರತದ ಪರ ಸಾಧು, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್‌ ಪಡೆದರು.

ಗುಂಪು ಹಂತದ ಮೂರು ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ ಕೇವಲ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತಿತ್ತು. ಇಂಗ್ಲೆಂಡ್‌ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿತ್ತು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!