೨೦೨೪ ರ ಟಿ೨೦ ವಿಶ್ವಕಪ್ ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ. ಇಡೀ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಕೂಡ ಸೋಲದೆ ಫೈನಲ್ ನಲ್ಲೂ ಅದೇ ಟ್ರೆಂಡ್ ಮುಂದುವರೆಸಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ೧೧ ವರ್ಷಗಳ ಬಳಿಕ ಕಪ್ ಗೆದ್ದುಕೊಂಡಿದೆ.
ಇನ್ನು ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ವಿಶ್ವದಾದ್ಯಂತ ಅಭಿಮಾನಿಗಳು ಪ್ರತಿ ಗಲ್ಲಿ-ಗಲ್ಲಿಗಳಲ್ಲಿ , ರಸ್ತೆ- ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಪಟಾಕಿಗಳನ್ನ ಸಿಡಿಸುವ ಮೂಲಕ ಜೊತೆಗೆ ಜಯಘೋಷಗಳೊಂದಿಗೆ ರಸ್ತೆಗಳನ್ನ ಬಂದು ಮಾಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಅಲ್ಲದೆ ಇನ್ನು ಕೆಲವು ಕಡೆ ಅಭಿಮಾನಿಗಳು ಸಿಹಿ ವಿತರಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ಕೂಡ ಟೀಂ ಇಂಡಿಯಾಗೆ ಶುಭಾಶಯ ತಿಳಿಸಿದ್ದಾರೆ.






