Mysore
27
clear sky

Social Media

ಶನಿವಾರ, 31 ಜನವರಿ 2026
Light
Dark

IND vs SRI t20 ಸರಣಿ: ಗಂಭೀರ್‌, ಸೂರ್ಯಕುಮಾರ್‌ಗೆ ಮೊದಲ ಪರೀಕ್ಷೆ

ಕೊಲೊಂಬೊ: ಇಂದಿನಿಂದ ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಟಿ-20 ಕ್ರಿಕೆಟ್ ಪಂದ್ಯ ಆರಂಭವಾಗಲಿದ್ದು, ಮುಖ್ಯ ಕೋಚ್‌ ಆಗಿ ನೇಮಕಗೊಂಡಿರುವ ಗೌತಮ್‌ ಗಂಭೀರ್‌ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಅವರಿಗೆ ಅಗ್ನಿ ಪರೀಕ್ಷೆ ಎದುರಾಗಿದೆ.

ರೋಹಿತ್ ಶರ್ಮಾ ಟಿ-20 ನಾಯಕತ್ವದಿಂದ ಕೆಳಗಿಳಿದ ಬಳಿಕ ಅಚ್ಚರಿಯೆಂಬಂತೆ ಸೂರ್ಯ ಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಮಾಡಿ ಬಿಸಿಸಿಐ ನೇಮಕಮಾಡಿತು. ಇದರೊಂದಿಗೆ ಶ್ರೀಲಂಕಾ ವಿರುದ್ಧ ಕಾದಾಟಕ್ಕೆ ತಂಡ ಸಿದ್ದವಾಗಿದ್ದು, ಸೂರ್ಯಕುಮಾರ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಹೇಗೆ ಮುನ್ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜತೆಗೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸ್ಥಾನಕ್ಕೆ ಯಾರನ್ನು ಕಣಕ್ಕಿಳಿಸಲಾಗುವುದು ಎಂಬುದನ್ನು ಕಾದುನೋಡಬೇಕಿದೆ. ವಿರಾಟ್‌ ಬದಲಿ ಸ್ಥಾನಕ್ಕೆ ರಿಷಭ್‌ ಪಂತ್‌ ಇಲ್ಲವಾದಲ್ಲಿ ಕೆ.ಎಲ್‌ ರಾಹುಲ್‌ರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಟಿ-20 ಸರಣಿಗೆ ಭಾರತ ತಂಡ: ಸೂರ್ಯಕುಮಾ‌ ಯಾದವ್ (ನಾಯಕ), ಶುಭಾಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ಸಂಜು ಸ್ಯಾಮನ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್‌ಟನ್ ಸುಂದರ್, ರವಿ ಬಿಪ್ಲೋಮ್, ಅರ್ಶ್ವದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್. ಟಿ-20 ಸರಣಿ

ವೇಳಾಪಟ್ಟಿ

ಮೊದಲ ಟಿ20 ಜು.27 ರಂದು ಸಂಜೆ 7ಕ್ಕೆ
2ನೇ ಟಿ20 ಜು.28ರಂದು ಸಂಜೆ 7ಕೆ
3ನೇ ಟಿ20 ಜು.30 ರಂದು ಸಂಜೆ 7ಕ್ಕೆ

Tags:
error: Content is protected !!