ಲೀಡ್ಸ್ : ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸೋಲಿನೊಂದಿಗೆ ಸರಣಿ ಆರಂಭಿಸಿದೆ. ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಭಾರತ(ಯಂಗ್ ಇಂಡಿಯಾ) ನೀಡಿದ್ದ 371ರನ್ ಗುರಿಯನ್ನು ಬೆನ್ನತ್ತಿದ್ದ ಆಂಗ್ಲರ ಪಡೆಗೆ ಬೆನ್ ಡಕೆಟ್ ಸಿಡಿಸಿದ ಭರ್ಜರಿ ಶತಕ, ಜ್ಯಾಕ್ ಕ್ರಾಲಿ ಮತ್ತು ಜೋ ರೊಟ್ ಅರ್ಧ ಶತಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯಿತು.
ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್
ಮತ್ತೊಂದೆಡೆ 371 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಲೀಡ್ಸ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಲೀಡ್ಸ್ ಮೈದಾನದಲ್ಲಿ ಅತೀ ಹೆಚ್ಚು ರನ್ ಬೆನ್ನಟ್ಟಿದ ದಾಖಲೆಯನ್ನು ಇಂಗ್ಲೆಂಡ್ ನಿರ್ಮಿಸಿದೆ.



