Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

IND vs ZIM 1st T20: ಜಿಂಬಾಬ್ವೆ ವಿರುದ್ಧ ಸೋತ ʼಯಂಗ್‌ ಟೀಮ್ ಇಂಡಿಯಾʼ

ಜಿಂಬಾಬ್ವೆ ಪ್ರವಾಸ ಕೈಗೊಂಡು 5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡುತ್ತಿರುವ ಶುಭ್ಮನ್‌ ಗಿಲ್‌ ನಾಯಕತ್ವದ ಯಂಗ್‌ ಟೀಮ್‌ ಇಂಡಿಯಾ ಇಂದು ( ಜುಲೈ 6 ) ಹರಾರೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 13 ರನ್‌ಗಳ ಹೀನಾಯ ಸೋಲನ್ನು ಕಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ಭಾರತ ತಂಡ ಜಿಂಬಾಬ್ವೆಯನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಜಿಂಬಾಬ್ವೆ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 115 ರನ್‌ ಕಲೆಹಾಕಿ ಭಾರತಕ್ಕೆ 116 ರನ್‌ಗಳ ಸುಲಭ ಗುರಿಯನ್ನು ನೀಡಿತು. ಆದರೆ ಜಿಂಬಾಬ್ವೆ ಬೌಲಿಂಗ್‌ ದಾಳಿ ಮುಂದೆ ಮಂಕಾದ ಭಾರತ 19.5 ಓವರ್‌ಗಳಲ್ಲಿ 102 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಜಿಂಬಾಬ್ವೆ ಇನ್ನಿಂಗ್ಸ್‌: ವೆಸ್ಲಿ ಮಾಧೆವೆರೆ 21, ಇನ್ನೋಸೆಂಟ್‌ ಡಕ್‌ಔಟ್‌, ಬ್ರಿಯಾನ್ ಬೆನೆಟ್ 22, ಸಿಕಂದರ್‌ ರಾಜಾ 17, ಡಿಯಾನ್‌ ಮೇರ್ಸ್‌ 23, ಜೋನಾಥನ್‌ ಡಕ್‌ಔಟ್‌, ಕ್ಲೈವ್‌ ಮಾಡೆಂಡ್‌ ಅಜೇಯ 29, ವೆಲ್ಲಿಂಗ್ಟನ್‌ ಮಸಾಕಡ್ಜ ಡಕ್‌ಔಟ್‌, ಲ್ಯೂಕ್‌ ಜೋಂಗ್ವೆ 1 ರನ್, ಮುಜರಾಬಾನಿ ಡಕ್‌ಔಟ್‌ ಮತ್ತು ಟೆಂಡೈ ಚಟಾರಾ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.

ಭಾರತದ ಪರ ರವಿ ಬಿಷ್ಣೋಯಿ 4 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌, ಅವೇಶ್‌ ಖಾನ್‌ ಹಾಗೂ ಮುಕೇಶ್‌ ಕುಮಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಭಾರತ ಇನ್ನಿಂಗ್ಸ್:‌ ಜಿಂಬಾಬ್ವೆ ನೀಡಿದ ಸುಲಭ ಗುರಿ ಬೆನ್ನಟ್ಟಲು ಯತ್ನಿಸಿದ ಭಾರತಕ್ಕೆ ಆರಂಭಿಕ ಆಘಾತವಾಯಿತು. ಮೊದಲ ಓವರ್‌ನಲ್ಲಿಯೇ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ ಡಕ್‌ಔಟ್‌ ಆದರೆ, ಮತ್ತೋರ್ವ ಆರಂಭಿಕ ಆಟಗಾರ ನಾಯಕ ಶುಭ್‌ಮನ್‌ ಗಿಲ್‌ 31 (29) ರನ್‌ ಗಳಿಸಿದರು.‌ ಅಂತಿಮ ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ಯುವ ಪ್ರಯತ್ನ ನಡೆಸಿದ ವಾಷಿಂಗ್ಟನ್‌ ಸುಂದರ್‌ 27 ರನ್‌ ಗಳಿಸಿದರು. ಇನ್ನುಳಿದಂತೆ ರುತುರಾಜ್‌ ಗಾಯಕ್ವಾಡ್‌ 7, ರಿಯಾನ್‌ ಪರಾಗ್‌ 2, ಧ್ರುವ್‌ ಜುರೆಲ್‌ 6, ರವಿ ಬಿಷ್ಣೋಯಿ 9, ಅವೇಶ್‌ ಖಾನ್‌ 16, ಮುಕೇಶ್‌ ಕುಮಾರ್‌ ಡಕ್‌ಔಟ್ ಮತ್ತು ಖಲೀಲ್‌ ಅಹ್ಮದ್‌ ಯಾವುದೇ ರನ್‌ ಗಳಿಸದೇ ಅಜೇಯರಾಗಿ ಉಳಿದರು.

ಜಿಂಬಾಬ್ವೆ ಪರ ನಾಯಕ ಸಿಕಂದರ್‌ ರಾಜಾ ಮತ್ತು ಟೆಂಡೈ ಚಟಾರಾ ತಲಾ 3 ವಿಕೆಟ್‌, ಲ್ಯೂಕ್‌ ಜೊಂಗ್ವೆ, ಬ್ಲೆಸಿಂಗ್‌ ಮಜಾರಾಬಾನಿ, ವೆಲ್ಲಿಂಗ್ಟನ್‌ ಮಸಾಕಡ್ಜ ಮತ್ತು ಬ್ರಿಯಾನ್‌ ಬೆನೆಟ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags: