Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಮ್ಯಾಕ್ಸ್‌ವೆಲ್‌ ಅಬ್ಬರದ ಶತಕದಾಟಕ್ಕೆ ಶರಣಾದ ಭಾರತ

ಗುವಾಹಟಿ : ಆಸ್ಟ್ರೇಲಿಯಾದ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ಅವರ ಅಬ್ಬರದ ಬ್ಯಾಟಿಂಗ್‌ ಮುಂದೆ ಮಂಕಾದ ಭಾರತ ತಂಡ 5 ವಿಕೆಟ್‌ಗಳ ಸೋಲು ಅನುಭವಿಸಿದೆ. ಆ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ ಭಾರತ ಮುಂದಿದೆ.

ಇಲ್ಲಿನ ಬಾರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 222ರನ್‌ಗಳ ಬೃಹತ್‌ ಮೊತ್ತ ಚೇಸ್‌ ಮಾಡಿದ ಆಸೀಸ್‌ 20 ಓವರ್‌ಗಳಲ್ಲಿ 225 ರನ್‌ ದಾಖಲಿಸಿದೆ. ಆ ಮೂಲಕ ಈ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿತು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಭಾರತ ತಂಡ, ಆರಂಭದಲ್ಲಿಯೇ ಆಘಾತ ಅನುಭವಿಸಿತು. ಯಶಸ್ವಿ ಜೈಸ್ವಾಲ್‌ ಕೇವಲ 6 ರನ್‌ ಗಳಿಸಿ ನಿರ್ಗಮಿಸಿದರೆ, ನಂತ ಬಂದ ಇಶಾನ್‌ ಕಿಸಾನ್‌ ಸೊನ್ನೆ ಸುತ್ತಿದರು. ಭಾರತ ತಂಡ ಪವರ್‌ ಪ್ಲೇ ಅಂತ್ಯಕ್ಕೆ2 ವಿಕೆಟ್‌ ಕಳೆದುಕೊಂಡು 43 ರನ್‌ ಗಳಿಸಿತು.

ನಂತರ ನಾಯಕ ಸೂರ್ಯಕುಮಾರ್‌ ಯಾದವ್‌ 39 ರನ್ ಗಳಿಸಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರು ಮತ್ತೊಂದೆಡೆ ಸದೃಢವಾಗಿ ಇನ್ನಿಂಗ್ಸ್‌ ಕಟ್ಟಿದರು. ತಾವೆದುರಿಸಿದ 57 ಎಸೆತಗಳಲ್ಲಿ 13 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 123 ರನ್‌ ಬಾರಿಸಿದರು. ಆಸೀಸ್‌ ವಿರುದ್ಧ ಟಿ20ಯಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಕೊನೆಯಲ್ಲಿ ಬಂದ ತಿಲಕ್‌ ವರ್ಮಾ 31 ರನ್‌ ಬಾರಿಸಿದರು.

ಅಂತಿಮವಾಗಿ ತಂಡ 20 ಓವರ್‌ಗಳಲ್ಲಿ 3  ವಿಕೆಟ್‌ ಕಳೆದುಕೊಂಡು 222 ರನ್‌ ಬಾರಿಸಿ ಆಸ್ಟ್ರೇಲಿಯಾಗೆ ಬೃಹತ್‌ ಮೊತ್ತದ ಗುರಿಯನ್ನು ನೀಡಿತು.

ಆಸೀಸ್‌ ಪರ ಬೆಹ್ರೆನ್‌ಡ್ರಾಫ್‌, ಹರ್ಡಲ್‌ ಮತ್ತು ರಿಚರ್ಡ್‌ಸನ್‌ ತಲಾ 1 ವಿಕೆಟ್‌ ಪಡೆದರು.

ಇದನ್ನು ಬೆನ್ನಟ್ಟಿದ ಆಸೀಸ್‌ ಪರ, ಟ್ರಾವೀಸ್‌ ಹೆಡ್‌ 36, ಆರೋನ್‌ ಹರ್ಡಲ್‌ 16, ಜೋಶ್‌ ಇಂಗ್ಲಿಸ್‌ 10 ರನ್‌ ಬಾರಿಸಿದರು. ತಂಡ ಒಂದು ಕಡೆ ವಿಕೆಟ್‌ ಕೆಲೆದುಕೊಳ್ಳುತ್ತಿದ್ದರೇ ಮತ್ತೊಂದು ಕಡೆ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ಭರ್ಜರಿ ಶತಕ ದಾಖಲಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

48 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್‌ ಮೂಲಕ ಬರೋಬ್ಬರಿ 104 ರನ್‌ ದಾಖಲಿಸಿದರು. ಇವರಿಗೆ ಮಾರ್ಕಸ್‌ ಸ್ಟೋಯ್ನಿಸ್‌ 17, ಮ್ಯಾಥ್ಯೂ ವೇಡ್‌ 28 ರನ್‌ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

ಇಂಡಿಯಾ ಪರ ರವಿ ಬಿಷ್ಣೋಯಿ 2, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌ ಮತ್ತು ಅಕ್ಷರ್‌ ಪಟೇಲ್‌ ತಲಾ 1 ವಿಕೆಟ್‌ ಪಡೆದರು.

ಕನ್ನಡಿಗ ಪ್ರಸಿದ್ಧ್‌ ಕೃಷ್ಣ 4 ಓವರ್‌ ಬೌಲ್‌ ಮಾಡಿ 68 ರನ್‌ ನೀಡಿ ದುಬಾರಿ ಬೌಲರ್‌ ಎನಿಸಿದರು.

ಪಂದ್ಯ ಶ್ರೇಷ್ಠ : ಗ್ಲೇನ್‌ ಮ್ಯಾಕ್ಸ್‌ವೆಲ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!