Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಭಾರತದ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ!

ದುಬೈ : ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನವು ರೋಚಕ ಜಯವನ್ನು ಗಳಿಸಿದೆ.

182 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ 19.5 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಕೊನೆಗೂ ಗೆಲುವು ಸಾಧಿಸಿತು.

ಪಾಕಿಸ್ತಾನದ ನಾಯಕ ಹಾಗೂ ಬ್ಯಾಟರ್ ಬಾಬರ್ ಆಝಂ ಬೇಗನೆ ವಿಕೆಟ್ ಕೈಚಲ್ಲಿದರು. ಫಾಖರ್ ಜುಮಾನ್ ಅವರು ಪದ್ಯಕ್ಕೆ ಇಳಿದ ಕೆಲವೇ ನಿಮಿಷಗಳಲ್ಲಿ ಔಟಾದರು. ಆಗ ಜೊತೆಯಾದ ರಿಝ್ವಾನ್ ಹಾಗೂ ಮೊಹಮ್ಮದ್ ನವಾಜ್ 3ನೇ ವಿಕೆಟಿಗೆ 73 ರನ್ ಜೊತೆಯಾಟ ನಡೆಸಿ ಗೆಲುವಿನ ವಿಶ್ವಾಸ ಮೂಡಿಸಿದರು. ನವಾಝ್ ವಿಕೆಟ್ ಉರುಳುಸಿದ ಭುವನೇಶ್ವರ ಕುಮಾರ್ ಈ ಜೋಡಿಯನ್ನು ಬೇರ್ಪಡಿಸಿದರು.

17ನೇ ಓವರ್ ನಲ್ಲಿ ರಿಝ್ವಾನ್ ವಿಕೆಟ್ ಅನ್ನು ಕಬಳಿಸಿದ ಹಾರ್ದಿಕ ಪಾಂಡ್ಯ ಪಾಕ್ ಗೆ ಆಘಾತ ನೀಡಿದರು. ಖುಷ್ ದಿಲ್ ಶಾ 14 ಹಾಗೂ ಆಸಿಫ್ ಅಲಿ 16 ಪಾಕಿಸ್ತಾನವನ್ನು ಗೆಲುವಿನ ದಡ ಸೇರಿಸಿದರು.

ಬೌಲಿಂಗ್ ನಲ್ಲಿ ಭಾರತದ ಪರ ಭುವನೇಶ್ವರ್, ಬಿಷ್ಣೋಯಿ, ಹಾರ್ದಿಕ್ ಪಾಂಡ್ಯ, ಯದುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ  ಅರ್ಧ ಶತಕ (60 ರನ್ 44 ಎಸೆತ) ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ