ಏಷ್ಯಾಕಪ್: ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಯನ್ನು 5 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಿದೆ. ಪಾಕಿಸ್ತಾನ ನೀಡಿದ 148 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 2 ಎಸೆತಗಳು ಬಾಕಿಯಿರುವಂತೆ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಗ್ರೂಪ್ ಎ ಪಾಯಿಂಟ್ ಟೇಬಲ್ನಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರಿದೆ.
ಇನ್ನು ಭಾರತ ತಂಡವು ಆಗಸ್ಟ್ 31 ರಂದು ಹಾಂಗ್ ಕಾಂಗ್ ವಿರುದ್ದ ಆಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೂಪರ್- 4 ಹಂತಕ್ಕೇರುವುದುನ್ನು ಖಚಿತ ಪಡಿಸಿಕೊಳ್ಳಲಿದೆ. ಮತ್ತೊಂದೆಡೆ ಪಾಕಿಸ್ತಾನ್ ಕೂಡ ಹಾಂಗ್ ಕಾಂಗ್ ವಿರುದ್ದ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಪಾಕ್ ಕೂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ್ ಸೂಪರ್- 4 ಹಂತದಲ್ಲಿ ಮತ್ತೆ ಮುಖಾಮುಖಿಯಾಗಲಿದೆ.
ಉಭಯ ತಂಡಗಳು ಸೂಪರ್-4 ಹಂತಕ್ಕೇರಿದರೆ ಸೆಪ್ಟೆಂಬರ್ 3 ರಂದು ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಅಂದರೆ ಮುಂದಿನ ಶನಿವಾರ ಮತ್ತೊಮ್ಮೆ ಇಂಡೋ-ಪಾಕ್ ಕ್ರಿಕೆಟ್ ಕದನವನ್ನು ವೀಕ್ಷಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ದೊರೆಯಲಿದೆ.
ಒಂದು ವೇಳೆ ಹಾಂಗ್ ಕಾಂಗ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಒಂದನ್ನು ಗೆದ್ದರೂ, ಸೂಪರ್- 4 ಹಂತಕ್ಕೇರಲು 2 ತಂಡಗಳ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ. ಹೀಗಾಗಿ ಹಾಂಗ್ ಕಾಂಗ್ ವಿರುದ್ದ ಪಾಕಿಸ್ತಾನ್ ಸೋತರೆ ಟೂರ್ನಿಯಿಂದಲೇ ಹೊರಬೀಳಬಹುದು.
ಸದ್ಯ ಪಾಕಿಸ್ತಾನ್ ವಿರುದ್ದ ಟಿ20 ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಂಡಿರುವ ಟೀಮ್ ಇಂಡಿಯಾ ಈ ಬಾರಿ ಏಷ್ಯಾಕಪ್ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಸೂಪರ್- 4 ಹಂತದಲ್ಲಿ ಭಾರತ-ಪಾಕ್ ಮುಖಾಮುಖಿಯಾದರೆ ಮುಂದಿನ ಹಂತ ಕೂಡ ರೋಚಕತೆಯಿಂದ ಕೂಡಿರಲಿದೆ. ಇನ್ನು ಸೂಪರ್-4 ಹಂತದ ಪಾಯಿಂಟ್ ಟೇಬಲ್ನಲ್ಲಿ ಭಾರತ-ಪಾಕಿಸ್ತಾನ್ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡರೆ ಫೈನಲ್ನಲ್ಲೂ ಮುಖಾಮುಖಿಯಾಗಬಹುದು. ಅದರಂತೆ ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನ್ ಮೂರು ಪಂದ್ಯಗಳನ್ನು ಆಡಲಿದೆಯಾ ಕಾದು ನೋಡಬೇಕಿದೆ.