Mysore
18
mist

Social Media

ಸೋಮವಾರ, 15 ಡಿಸೆಂಬರ್ 2025
Light
Dark

ICC TEST RANKING ಪಟ್ಟಿಯ ಮೂರು ಮಾದರಿಯಲ್ಲೂ ಭಾರತ ನಂ 1 ಸ್ಥಾನ

ದುಬೈ: ತಾಂತ್ರಿಕ ದೋಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಂ ಇಂಡಿಯಾ ಟೆಸ್ಟ್​, ಏಕದಿನ ಮತ್ತು ಟಿ-20 ಸೇರಿ ಮೂರು ಮಾದರಿಯಲ್ಲೂ ನಂಬರ್​ ಒನ್​ ಪಟ್ಟಕ್ಕೇರಿತ್ತು. ಟಿ-20ರಲ್ಲಿ 267 ಅಂಕ, ಏಕದಿನದಲ್ಲಿ 114 ಅಂಕ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ 115 ಅಂಕಗಳೊಂದಿಗೆ ಭಾರತ ಅಗ್ರಸ್ಥಾನದಲ್ಲಿತ್ತು. ಆದ್ರೆ 126 ಅಂಕಗಳನ್ನು ಪಡೆದಿದ್ದ ಆಸ್ಟ್ರೇಲಿಯಾ ತಂಡ ಮಾತ್ರ ಎರಡನೇ ಸ್ಥಾನದಲ್ಲಿತ್ತು.ಮೊದಲ ಟೆಸ್ಟ್‌ನಲ್ಲಿ ಸೋತಿದ್ದ ಆಸೀಸ್ 15 ಅಂಕ ಕಳೆದುಕೊಂಡು ಐಸಿಸಿ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನ 2:30ಕ್ಕೆ ಎರಡನೇ ರ್ಯಾಂಕ್‌ಗೆ ಕುಸಿದಿತ್ತು. ಆದರೆ ಮತ್ತೆ ತಪ್ಪಿನ ಅರಿವಾಗಿ ಸಂಜೆ 7 ಗಂಟೆಗೆ ಐಸಿಸಿ ಇದನ್ನು ಸರಿಪಡಿಸಿಕೊಂಡಿದೆ. ಇದರಿಂದಾಗಿ ಮೊದಲೆರಡು ಸ್ಥಾನಗಳಲ್ಲಿ ಆಸೀಸ್ ಹಾಗೂ ಭಾರತ ಮುಂದುವರಿದಿದೆ.


ಏಕದಿನ ಹಾಗೂ ಟಿ20ಯಲ್ಲಿ ಟೀಂ ಇಂಡಿಯಾ ನಂಬರ್ ಒನ್ ಆಗಿರುವುದು ಈಗಾಗಲೇ ತಿಳಿದೇ ಇದೆ. ರೋಹಿತ್ ಸೇನೆ ಎರಡನೇ ಟೆಸ್ಟ್‌ನಲ್ಲಿ ಗೆದ್ದರೆ ಟೆಸ್ಟ್‌ನಲ್ಲೂ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲಿದೆ. ಮತ್ತೊಂದೆಡೆ, ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಸ್ಪಿನ್ನರ್ ಅಶ್ವಿನ್ ಎರಡನೇ ರ‍್ಯಾಂಕಿಂಗ್‌ ಪಡೆದಿದ್ದಾರೆ. ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಬಲಿಷ್ಠ ಪುನರಾಗಮನ ಮಾಡಿಕೊಂಡಿರುವ ಜಡೇಜಾ ಬೌಲರ್​ಗಳ ರ‍್ಯಾಂಕಿಂಗ್​ನಲ್ಲಿ 16ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸೀಸ್ ನಾಯಕ ಕಮ್ಮಿನ್ಸ್ ಅಗ್ರಸ್ಥಾನದಲ್ಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!