Mysore
22
scattered clouds

Social Media

ಶುಕ್ರವಾರ, 14 ಮಾರ್ಚ್ 2025
Light
Dark

ದುಬೈ ಪಿಚ್‌ನಲ್ಲಿ ಹೇಗೆ ಆಡಬೇಕೆಂದು ಭಾರತಕ್ಕೆ ಸ್ಪಷ್ಟತೆ ಇದೆ: ವಿಲಿಯಮ್ಸನ್‌

ದುಬೈ: ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದ್ದು, ಆ ಪಿಚ್‌ನಲ್ಲಿ ಹೇಗೆ ಆಡಬೇಕೆಂದು ತಂಡಕ್ಕೆ ಸ್ಪಷ್ಟತೆ ಇದೆ ಎಂದು ನ್ಯೂಜಿಲೆಂಡ್‌ ತಂಡದ ಆಟಗಾರ ಕೇನ್‌ ವಿಲಿಯಮ್ಸನ್‌ ಹೇಳಿದ್ದಾರೆ.

ಪಾಕಿಸ್ತಾನದ ಅತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕಿಕೆಟ್‌ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಢ್‌ ತಂಡಗಳು ಸೆಣಸಲಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇನ್‌, ಭಾರತಕ್ಕೆ ಒಂದೇ ಕ್ರೀಡಾಂಗಣದಲ್ಲಿಆಡುವ ಅನುಕೂಲತೆ ಇದ್ದು, ಇದರಿಂದ ಪಂದ್ಯದ ನಂತರ ಸಾಕಷ್ಟು ವಿಶ್ರಾಂತಿ ಮತ್ತು ಅದೇ ಮೈದಾನದಲ್ಲಿ ಪೂರ್ವ ಸಿದ್ದತೆಗೆ ಅವಕಾಶ ಇರುತ್ತದೆ.

ನಾವು ಈ ಕುರಿತು ಹೆಚ್ಚು ಚಿಂತಿತರಾಗಿಲ್ಲ. ದುಬೈ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಲಿದೆ. ಅದನ್ನು ಪರಿಗಣಿಸಿ ಧನಾತ್ಮಕ ಅಂಶಗಳೊಂದಿಗೆ ಫೈನಲ್‌ಗಾಗಿ ಸಿದ್ದತೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಈಗಾಗಲೇ ದುಬೈ ಪಿಚ್‌ನಲ್ಲಿ ಒಂದು ಪಂದ್ಯ ಆಡಿರುವುದರಿಂದ ಪಿಚ್‌ಗೆ ಹೊಂದಿಕೊಳ್ಳಲು ನೆರವಾಗಲಿದೆ ಎಂದು ಹೇಳಿದ್ದಾರೆ.

Tags: