Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

17 ವರ್ಷಗಳ ಬಳಿಕ ಪ್ರಶಸ್ತಿಗಾಗಿ ಕಾದಾಟ ನಡೆಸಲಿರುವ ಇಂಡಿಯಾ/ಪಾಕಿಸ್ತಾನ್‌

ಲಂಡನ್‌: ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. 17 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೆ ಇತ್ತಂಡಗಳು ಆಗಮಿಸಿದ್ದು, ಟ್ರೋಫಿಗಾಗಿ ಕಾದಾಟ ನಡೆಸಲಿವೆ.

ಇಲ್ಲಿ ನಡೆಯುತ್ತಿರುವ ವರ್ಲ್ಡ್‌ ಚಾಂಪಿಯನ್‌ಶಿಪ್‌ ಆಫ್‌ ಲೆಜೆಂಡ್ಸ್‌-2024 (ಡಬ್ಲ್ಯೂಸಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಇಂಡಿಯಾ ಚಾಂಪಿಯನ್ಸ್‌ ಹಾಗೂ ಪಾಕಿಸ್ತಾನ್‌ ಚಾಂಪಿಯನ್ಸ್‌ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸುತ್ತಿದ್ದು ಗೆದ್ದ ತಂಡ ಟ್ರೋಫಿಗೆ ಮುತ್ತಿಡಲಿದೆ.

ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್‌ ತಂಡವನ್ನು 86ರನ್‌ ಗಳಿಂದ ಭಾರತ ತಂಡ ಮಣಿಸಿ ಫೈನಲ್‌ ಲಗ್ಗೆಯಿಟ್ಟರೇ, ಇತ್ತ ವೆಸ್ಟ್‌ ಇಂಡೀಸ್‌ ತಂಡವನ್ನು 20ರನ್‌ ಗಳಿಂದ ಸೋಲಿಸಿದ ಪಾಕಿಸ್ತಾನ ಕೂಡಾ ಫೈನಲ್‌ಗೆ ಟಿಕೆಟ್‌ ಪಡೆದುಕೊಂಡಿದೆ.

ಕ್ರಿಕೆಟ್‌ನ ಬದ್ಧ ವೈರಿಗಳು ಎಂದೇ ಖ್ಯಾತರಾಗಿರುವ ಇತ್ತಂಡಗಳು ಶನಿವಾರ ಪ್ರಶಸ್ತಿಗಾಗಿ ಕಾದಾಡಲಿವೆ.

ಇಲ್ಲಿನ ಬರ್ಮಿಂಗ್‌ಹ್ಯಾಮ್‌ ಕ್ರೀಡಾಂಗಣದಲ್ಲಿ ಇಂದು (ಜು.13) ರಾತ್ರಿ 9 ಗಂಟೆ (ಭಾರತೀಯ ಕಾಲಮಾನ) ಪಂದ್ಯ ನಡೆಯಲಿದೆ.

ಲೈವ್‌ ವೀಕ್ಷಣೆ: ಭಾರತ ಹಾಗೂ ಪಾಕಿಸ್ತಾನ ನಡುವಣ ಫೈನಲ್‌ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ ಫ್ಯಾನ್‌ಕೋಡ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ವೀಕ್ಷಿಸಬಹುದಾಗಿದೆ.

Tags: