Mysore
28
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಅಮೆರಿಕದ ಶಕ್ತಿಶಾಲಿ ಫೈಟರ್‌ ಜೆಟ್‌ ಖರೀದಿ ಆಲೋಚನೆ ಕೈಬಿಟ್ಟ ಭಾರತ

ಹೊಸದಿಲ್ಲಿ: ಅಮೆರಿಕದ ಎಫ್-35 ಯುದ್ಧ ವಿಮಾನ ಖರೀದಿಸುವ ಆಲೋಚನೆಯನ್ನು ಭಾರತ ಕೈಬಿಟ್ಟಿದೆ. ಭಾರತದ ಮೇಲೆ ಅಮೆರಿಕ ಶೇ 25ರಷ್ಟು ಆಮದು ಸುಂಕ ಹೇರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಭಾರತ ಇನ್ನೂ ಕೂಡ ಯಾವುದೇ ಪ್ರತಿಸುಂಕ ವಿಧಿಸುವ ಯೋಚನೆ ಮಾಡಿಲ್ಲ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಸಂಬಂಧ ಮಾತುಕತೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವವರೆಗೂ ಶೇ.25ರ ತೆರಿಗೆಯನ್ನು ಭಾರತ ಸಹಿಸಿಕೊಳ್ಳಬೇಕಾಗಬಹುದು.

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಡೊನಾಲ್ಡ್ ಟ್ರಂಪ್ ಅವರು ಎಫ್-35 ಫೈಟರ್ ಜೆಟ್ ಅನ್ನು ಭಾರತಕ್ಕೆ ಆಫರ್ ಮಾಡಿದ್ದರು. ಇದೀಗ ಶಕ್ತಿಶಾಲಿ ಫೈಟರ್ ಜೆಟ್ ಎನಿಸಿದ ಎಫ್-35 ಅನ್ನು ಖರೀದಿಸುವ ಆಸಕ್ತಿ ಇಲ್ಲ ಎಂದು ಅಮೆರಿಕಕ್ಕೆ ಭಾರತ ತಿಳಿಸಿದೆ.

ಎಫ್-35 ವಿಮಾನವನ್ನು ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ತಯಾರಿಸುತ್ತದೆ. ಭಾರತವು ಜಂಟಿಯಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಆದ್ಯತೆ ನೀಡುತ್ತಿದೆ.ಆದರೆ ಭಾರತೀಯ ಕಂಪೆನಿಯೊಂದಿಗೆ ಜಂಟಿಯಾಗಿ ಈ ಯುದ್ಧವಿಮಾನ ತಯಾರಿಸಲು ಅಮೆರಿಕ ಸಿದ್ಧವಿಲ್ಲ. ಭಾರತ ತನ್ನ ಮಿಲಿಟರಿ ಉಪಕರಣಗಳ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿದೆ. ಈ ಕಾರಣಕ್ಕೆ ಎಫ್-35 ಯುದ್ಧವಿಮಾನ ಖರೀದಿ ಪ್ರಸ್ತಾಪದಿಂದ ಭಾರತ ಹಿಂದಕ್ಕೆ ಸರಿದಿರಬಹುದು. ಭಾರತ ತಾನೇ ಸ್ವಂತವಾಗಿ ಈ ಫೈಟರ್ ಜೆಟ್ ತಯಾರಿಸುವ ಪ್ರಯತ್ನದಲ್ಲಿದೆ. ಅದಕ್ಕೆ ಎಎಂಸಿಎ ಪ್ರಾಜೆಕ್ಟ್ ಆರಂಭವಾಗಿದೆ.

Tags:
error: Content is protected !!