Mysore
20
overcast clouds
Light
Dark

ಶ್ರೀಲಂಕಾ ವಿರುದ್ಧ ಸರಣಿಗೆ ಟೀಂ ಇಂಡಿಯಾ ಪ್ರಕಟ: ಏಕದಿನಕ್ಕೆ ರೋಹಿತ್‌, ಟಿ20ಗೆ ಸ್ಕೈ ನಾಯಕ!

ನವದೆಹಲಿ: ಮುಂಬರುವ ಭಾರತ ಹಾಗೂ ಶ್ರೀಲಂಕಾ ನಡುವಣಾ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಒಡಿಐ (ಏಕದಿನ) ತಂಡಕೆ ರೋಹಿತ್‌ ಶರ್ಮಾ ನಾಯಕರಾಗಿ ಮುಂದುವರೆದರೇ ಟಿ20 ತಂಡಕ್ಕೆ ಅಚ್ಚರಿಯಂಬಂತೆ ಸೂರ್ಯಕುಮಾರ್‌ ಯಾದವ್‌ ಅವರನ್ನು ನೇಮಕ ಮಾಡಿ ಬಿಸಿಸಿಐ ಆದೇಶ ಹೊಡಿಸಿದೆ.

ಜೊತೆಗೆ 2023ರ ವಿಶ್ವಕಪ್‌ ಬಳಿಕ ಭಾರತ ತಂಡಕ್ಕೆ ಕರ್ನಾಟಕದ ಯುವ ಬ್ಯಾಟರ್‌ ಕೆ.ಎಲ್‌ ರಾಹುಲ್‌ ಅವರು ಕಂಬ್ಯಾಕ್‌ ಮಾಡಿದ್ದಾರೆ. ಅವರು ತಂಡದಲ್ಲಿ ವಿಕೇಟ್‌ ಕೀಪರ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಟಿ20 ವಿಶ್ವಕಪ್‌ ಗೆದ್ದ ತಂಡದಲ್ಲಿದ್ದ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸೇರಿದಂತೆ ಅನೇಕರಿಗೆ ಬಿಸಿಸಿಐ ವಿಶ್ರಾಂತಿ ನೀಡಲಿದೆ ಎಂದು ಊಹಿಸಲಾಗಿತ್ತು. ಆದರೆ ಈ ಎಲ್ಲಾ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ರವಿಂದ್ರ ಜಡೇಜಾ ಹಾಗೂ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಇನ್ನು ಅಚ್ಚರಿಯಂಬಂತೆ ಟೀಂ ಇಂಡಿಯಾದ ಯುವ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಏಕದಿನ ಹಾಗೂ ಟಿ20 ಎರಡೂ ತಂಡಕ್ಕೂ ಉಪ ನಾಯಕರಾಗಿ ನೇಮಕಗೊಂಡಿದ್ದಾರೆ.

ಏಕದಿನ ಸರಣಿಗೆ ಭಾರತ ತಂಡ ಇಂತಿದೆ: ರೋಹಿತ್‌ ಶರ್ಮಾ (ನಾಯಕ), ಶುಬ್‌ಮನ್‌ ಗಿಲಗಗಗ (ಉಪ ನಾಯಕ), ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌ (ವಿ.ಕೀ), ರಿಷಭ್‌ ಪಂತ್‌ (ವಿ.ಕೀ), ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್‌ಟನ್‌ ಸುಂದರ್‌, ಅರ್ಶ್‌ದೀಪ್‌ ಸಿಂಗ್‌, ರಿಯಾನ್‌ ಪರಾಗ್‌, ಅಕ್ಷರ್‌ ಪಟೇಲ್‌, ಖಲೀಲ್‌ ಅಹ್ಮದ್‌, ಹರ್ಷಿತ್‌ ರಾಣಾ.

ಟಿ20 ಸರಣಿಗೆ ಭಾರತ ತಂಡ ಇಂತಿದೆ: ಸೂರ್ಯಕುಮಾರ್‌ ಯಾದವ್‌ (ನಾಯಕ), ಶುಬ್‌ಮನ್‌ ಗಿಲ್‌ (ಉಪನಾಯಕ), ಯಶಸ್ವಿ ಜೈಸ್ವಾಲ್‌, ರಿಂಕು ಸಿಂಗ್‌, ರಿಯಾನ್‌ ಪರಾಗ್‌, ಸಂಜು ಸ್ಯಾಮ್ಸನ್‌ (ವಿ.ಕೀ), ರಿಷಭ್‌ ಪಂತ್‌ (ವಿ.ಕೀ), ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್‌, ವಾಷಿಂಗ್‌ಟನ್‌ ಸುಂದರ್‌, ರವಿ ಬಿಷ್ಣೋಯ್‌, ಅರ್ಶ್‌ದೀಪ್‌ ಸಿಂಗ್‌, ಖಲೀಲ್‌ ಅಹ್ಮದ್‌, ಮೊಹಮ್ಮದ್‌ ಸಿರಾಜ್‌.

ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಹಾಗೂ ಟಿ20 ಏಕದಿನ ಸರಣಿ ವೇಳಾಪಟ್ಟಿ.

ಟಿ20 ಏಕದಿನ ಸರಣಿ ವೇಳಾಪಟ್ಟಿ
ಮೊದಲ ಟಿ20 ಜು.27 ರಂದು ಸಂಜೆ 7ಕ್ಕೆ
ಎರಡನೇ ಟಿ20 ಜು.28 ರಂದು ಸಂಜೆ 7ಕ್ಕೆ
ಮೂರನೇ ಟಿ20 ಜು.30 ರಂದು ಸಂಜೆ 7ಕ್ಕೆ

ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ ಆಗಸ್ಟ್‌. 2ರಂದು ಮದ್ಯಾಹ್ನ 2.30ಕ್ಕೆ
ಎರಡನೇ ಏಕದಿನ ಆಗಸ್ಟ್‌. 4ರಂದು ಮದ್ಯಾಹ್ನ 2.30ಕ್ಕೆ
ಮೂರನೇ ಏಕದಿನ ಆಗಸ್ಟ್‌. 7ರಂದು ಮದ್ಯಾಹ್ನ 2.30ಕ್ಕೆ

https://x.com/PTI_News/status/1813937195096449451