Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

IND vs SA 2nd test: ಟೀಂ ಇಂಡಿಯಾಗೆ ಭರ್ಜರಿ ಗಲುವು; ಸರಣಿ ಸಮಬಲ

ಕೇಪ್‌ಟೌನ್‌: ಟೀಂ ಇಂಡಿಯಾ ಮಾರಕ ಬೌಲಿಂಗ್‌ ದಾಳಿಗೆ ನಲುಗಿನ ಹರಿಣ ಪಡೆ ಎರಡನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 7 ವಿಕೆಟ್‌ಗಳ ಸೋಲು ಕಂಡಿದೆ. ಆ ಮೂಲಕ ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಇತ್ತಂಡಗಳು ಸರಣಿ ಸಮಬಲದೊಂದಿಗೆ ತೃಪ್ತಿಪಟ್ಟುಕೊಂಡಿವೆ.

ಇಲ್ಲಿನ ನ್ಯೂಲ್ಯಾಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯ ಎರಡನೇ ಟೆಸ್ಟ್ ಪಂದ್ಯದ 2ನೇ ದಿನವಾದ ಗುರುವಾರ ಮತ್ತೆ ವೇಗದ ಬೌಲರ್‌ಗಳೇ ಪಾರುಪತ್ಯ ಮೆರೆದಿದ್ದಾರೆ. ಹರಿಣ ಪಡೆ ಭಾರತ ತಂಡದ ಮುಂದೆ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಸೋಲನುಭವಿಸಿದೆ.

62 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 176 ರನ್‌ಗಳಿಗೆ ಸರ್ವಪತನ ಕಂಡಿತು. ಏಡನ್ ಮರ್ಕರಂ ಅವರ ಏಕಾಂಗಿ ಹೋರಾಟ ನಡೆಸಿ 106 ರನ್‌ಗಳಿಸಿ ಗಮನ ಸೆಳೆದರು. ಆಫ್ರಿಕಾ ತಂಡ ಭಾರತಕ್ಕೆ 79 ರನ್‌ಗಳ ಗೆಲುವಿನ ಗುರಿ ನೀಡಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 3 ವಿಕೆಟ್‌ ಕಳೆದುಕೊಂಡು 80 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಭಾರತ ತಂಡದ ಪರ ಯಶಸ್ವಿ 28, ಶುಭ್‌ಮನ್‌ ಗಿಲ್‌ 10, ವಿರಾಟ್‌ ಕೊಹ್ಲಿ 12 ರನ್‌ ಗಳಿಸಿದರೆ, ನಾಯಕ ರೋಹಿತ್‌ ಶರ್ಮಾ ಔಟಾಗದೇ 17 ಮತ್ತು ಇವರಿಗೆ ಜೊತೆಯಾಗಿ ಶ್ರೇಯಸ್‌ ಅಯ್ಯರ್‌ 4 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟೀಂ ಇಂಡಿಯಾ ಅಂತಿಮವಾಗಿ 12 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 80 ರನ್‌ ದಾಖಲಿಸಿತು. ಹರಿಣ ಪಡೆಯಲ್ಲಿ ಕಗಿಸೋ ರಬಾಡ, ಬರ್ಜರ್‌ ಮತ್ತು ಎನ್ಸನ್‌ ತಲಾ 1 ವಿಕೆಟ್‌ ಪಡೆದರು.

ಎರಡನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡ ಭಾರತದ ವೇಗಿ ಮೊಹಮ್ಮದ್ ಸಿರಾಜ್ (15ಕ್ಕೆ6) ದಾಳಿಗೆ ತತ್ತರಿಸಿಹೋಯಿತು. 23.2 ಓವರ್‌ಗಳಲ್ಲಿ 55 ರನ್ ಗಳಿಸಿ ಆಲೌಟ್ ಆಗಿ, ಆತಿಥೇಯರ ಮೊದಲ ಇನಿಂಗ್ಸ್ ಮುಕ್ತಾಯವಾಯಿತು.

ಊಟದ ವಿರಾಮದ ನಂತರ ಇನಿಂಗ್ಸ್ ಆರಂಭಿಸಿದ ಭಾರತ ತಂಡ 34.5 ಓವರ್‌ಗಳಲ್ಲಿ 153 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ 98 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಮುಕ್ತಾಯಕ್ಕೆ 17 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 62 ರನ್ ಗಳಿಸಿ ಇವತ್ತಿಗೆ(ಗುರುವಾರ) ಆಟ ಕಾಯ್ದಿರಿಸಿತ್ತು.

ಎರಡನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ 36.5 ಓವರ್‌ಗಳಲ್ಲಿ 176 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡ 12 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 80 ರನ್‌ ಬಾರಿಸಿ ಸರಣಿ ಸಮಬಲ ಮಾಡಿಕೊಂಡಿತು.

ಪಂದ್ಯ ಶ್ರೇಷ್ಠ: ಮಹಮ್ಮದ್‌ ಸಿರಾಜ್‌

ಸರಣಿ ಶ್ರೇಷ್ಠ: ಡೀನ್‌ ಎಲ್ಗರ್‌ ಮತ್ತು ಜಸ್‌ಪ್ರಿತ್‌ ಬುಮ್ರಾ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ