ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲೇ ಬೇಕಾದ ಅನಿವಾರ್ಯವಿದೆ. ಇಂದು ನಡೆಯಲಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೇ ಸರಣಿ ಜೊತೆಗೆ ಆಫ್ರಿಕಾ ನೆಲದಲ್ಲಿ ಸೀರಿಸ್ ಒಂದನ್ನು ಬಹಳ ವರ್ಷಗಳ ನಂತರ ಗೆದ್ದ ಹೆಗ್ಗಳಿಕೆ ಪಾತ್ರವಾಗಲಿದೆ.
ಈ ಸರಣಿಯ ಮೊಲದೆರೆಡು ಪಂದ್ಯಗಳಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ. ಸರಣಿಯ ಮೊದಲ ಪಂದ್ಯ ಟೀಂ ಇಂಡಿಯಾ ಗೆದ್ದರೇ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯಶಾಲಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮೂರನೇ ಪಂದ್ಯದಲ್ಲಿ ಗೆದ್ದ ತಂಡ ಟ್ರೋಫಿಯನ್ನು ಎತ್ತಿಹಿಡಿಯಲ್ಲಿದೆ.
ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ
ಮೂರನೇ ಏಕದಿನ ಪಂದ್ಯ: ಡಿಸೆಂಬರ್ 21
ಸ್ಥಳ: ಪಾರ್ಲ್ ನಗರದ ಬೌಲ್ಯಾಂಡ್ ಪಾರ್ಕ್ ಸ್ಟೇಡಿಯಂ
ಸಮಯ: ಭಾರತೀಯ ಕಾಲಮಾನ ಸಂಜೆ 4.30 ಗಂಟೆಗೆ
ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್
ನೇರ ವೀಕ್ಷಣೆ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಉಭಯ ತಂಡಗಳು:
ಟೀಂ ಇಂಡಿಯಾ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ-ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಆಕಾಶ್ ದೀಪ್.
ದಕ್ಷಿಣ ಆಫ್ರಿಕಾ ತಂಡ: ಏಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಟೋನಿ ಡಿ ಜೊರ್ಜಿ, ನಾಂಡ್ರೆ ಬರ್ಗರ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಜ್ ಶಮ್ಸಿ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್, ಲಿಜಾದ್ ವಿಲಿಯಮ್ಸ್.