Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

IND vs RSA 1st test: ಟೀಂ ಇಂಡಿಯಾಗೆ ಅಫ್ರಿಕಾ ನೆಲದಲ್ಲಿ ಸರಣಿ ಜಯದ ಕನಸು ನನಸಾಗಲಿದೆಯಾ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನುಡವಿನ ಮೊದಲ ಟೆಸ್ಟ್‌ ಪಂದ್ಯ ಇಂದು ಆರಂಭವಾಗಲಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಮಾತ್ರ ಈವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಇದೀಗ ಇತಿಹಾಸ ಸೃಷ್ಟಿಸಲು ಹೊರಟಿರುವ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಇಂದು ಇಂಡೋ-ಆಫ್ರಿಕಾ ಪ್ರಥಮ ಟೆಸ್ಟ್ ಪಂದ್ಯ ಸೆಂಚುರಿಯನ್​ನ ಸೂಪರ್ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಇಂದು (ಮಂಗಳವಾರ) ಮದ್ಯಾಹ್ನ 1.30ಕ್ಕೆ ನಡೆಯಲಿದೆ.

ತವರು ನೆಲದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಈವರೆಗೆ ಒಂದೇ ಒಂದು ಟೆಸ್ಟ್‌ ಸರಣಿ ಸೋಲದ ದಕ್ಷಿಣ ಆಫ್ರಿಕಾ ತಂಡಕ್ಕೆ ರೋಹಿತ್‌ ಬಳಗ ಸೋಲಿನ ಕಹಿ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಆದರೆ, ಸೆಂಚುರಿಯನ್ ಹವಾಮಾನವು ಈ ಟೆಸ್ಟ್ ಪಂದ್ಯಕ್ಕೆ ಅಡ್ಡಿ ಪಡಿಸುವುದು ದಟ್ಟವಾಗಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣ ಆಫ್ರಿಕಾದ ಈ ನಗರದಲ್ಲಿ ಹವಾಮಾನವು ಸ್ಪಷ್ಟ ಮತ್ತು ಬಿಸಿಲಿನಿಂದ ಕೂಡಿದೆ. ಆದರೆ ಮಂಗಳವಾರದಂದು, ಪಂದ್ಯ ಆರಂಭವಾಗುವ ದಿನ ಹವಾಮಾನವು ಫೌಲ್ ಎಂದು ಹೇಳಲಾಗುತ್ತದೆ.

ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ, ಡಿಸೆಂಬರ್ 26 ರಂದು ಸೆಂಚುರಿಯನ್‌ನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮಳೆಯ ಸಾಧ್ಯತೆ ಶೇಕಡಾ 96 ರಷ್ಟಿದೆ. ಪಿಟಿಐ ಜೊತೆ ಮಾತನಾಡಿದ ಕ್ಯುರೇಟರ್ ಬ್ಲೋಯ್, ಮುಂದಿನ ದಿನಗಳಲ್ಲಿ ತಾಪಮಾನವು 20 ಡಿಗ್ರಿಗಳಿಗೆ ಇಳಿಯಬಹುದು ಮತ್ತು ಮೊದಲ ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಪಿಚ್‌ ರಿಪೋರ್ಟ್‌:
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿನ ಪಿಚ್ ಕಠಿಣವಾಗಿದ್ದು ವೇಗ ಮತ್ತು ಬೌನ್ಸಿಯಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ವೇಗವಾದ ಪಿಚ್ ಎಂದು ಲೇಬಲ್ ಮಾಡಲಾಗಿದೆ. ಪಿಚ್ ಬೌಲರ್‌ಗಳಿಗೆ (ವಿಶೇಷವಾಗಿ ವೇಗಿಗಳಿಗೆ) ಹೆಚ್ಚು ಅನುಕೂಲಕರವಾಗಿದ್ದು, ಬ್ಯಾಟರ್‌ಗಳು ಅಲ್ಪ ಮಟ್ಟಿಗೆ ಯಶಸ್ಸು ಸಾಧಿಸುತ್ತಾರೆ. ಇಲ್ಲಿ ಸ್ಪಿನ್ನರ್‌ಗಳು ಎಂದಿಗೂ ಉತ್ತಮ ಪ್ರದರ್ಶನ ನೀಡಿಲ್ಲ.

ಈ ಪಿಚ್​ನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 330 ಆಗಿದೆ. ಇಲ್ಲಿ ಬ್ಯಾಟ್ ಮಾಡಲು ಮೊದಲ ಇನ್ನಿಂಗ್ಸ್‌ ಸಹಾಯ ಮಾಡುತ್ತದೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಅತ್ಯಂತ ಕಷ್ಟಕರವಾಗಿದೆ. ಇಲ್ಲಿ ಆಡಿದ 28 ಪಂದ್ಯಗಳಲ್ಲಿ ಯಾವುದೇ ತಂಡವು ಇಲ್ಲಿಯವರೆಗೆ 250 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಗುರಿಯನ್ನು ಬೆನ್ನಟ್ಟಿಲ್ಲ.

ಈವರೆಗೆ ಭಾರತ ತಂಡ ಪರವಾಗಿ ಆಫ್ರಿಕಾ ನೆಲದಲ್ಲಿ ರಾಹುಲ್‌ ದ್ರಾವಿಡ್‌, ಎಂ ಎಸ್‌ ಧೋನಿ ಮತ್ತು ವಿರಾಟ್‌ ಕೊಹ್ಲಿ ಅವರು ತಲಾ ಒಂದೊಂದು ಪಂದ್ಯಗಳನ್ನು ಮಾತ್ರ ಗೆದ್ದಿದ್ದಾರೆ. ಯಾರಿಂದಲೂ ಸರಣಿ ಗೆಲ್ಲಲ್ಲು ಆಗಿಲ್ಲ. ಈ ದಾಖಲೆಯನ್ನು ರೋಹಿತ್‌ ಸರಿಗಟ್ಟಿ ಮೊದಲ ಬಾರಿಗೆ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ