Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

IND vs RSA 1st test: ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌; 408ಕ್ಕೆ ಸರ್ವಪತನ

ಸೆಂಚುರಿಯನ್‌: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ ಪಂದ್ಯ ಮೂರನೇ ದಿನದಲ್ಲಿ ದಕ್ಷಿಣ ಆಫ್ರಿಕಾ ತಂಡ 408 ಪೇರಿಸಿ ಟೀಂ ಇಂಡಿಯಾಗೆ 163 ರನ್‌ ಗಳ ಟ್ರಯಲ್‌ ನೀಡಿದೆ.

ಇಲ್ಲಿನ ಸೂಪರ್‌ ಸ್ಪೋರ್ಟ್ಸ್‌ ಪಾರ್ಕ್‌ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್‌ ಡೆ ಟೆಸ್ಟ್‌ ಪಂದ್ಯದಲ್ಲಿ ಭಾರತ ವಿರುದ್ಧ ಸೌಥ್‌ ಆಫ್ರಿಕಾ ತಂಡ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ ಗಳಿಗೆ ಸರ್ವಪತನ ಕಂಡಿತ್ತು. ಎರಡನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ 5 ವಿಕೆಟ್‌ಗೆ 266 ರನ್‌ ಗಳಿಸಿ 11ರನ್‌ ಗಳ ಮುನ್ನಡೆ ಕಾಯುಕೊಂಡು ಮೂರನೇ ದಿನಕ್ಕೆ ಕಾಲಿಟ್ಟಿತು.

ಇಂದು ಭಾರತ ತಂಡದ ದಿಟ್ಟ ಬೌಲಿಂಗ್‌ ಪಡೆ 138 ರನ್‌ ಗಳಿಗೆ ಹರಿಣ ಪಡೆಯನ್ನು ಕಟ್ಟಿಹಾಕಿತು. ಸೌಥ್‌ ಆಫ್ರಿಕಾ ಪರ ಡೀನ್‌ ಎಲ್ಗರ್‌ 185 ರನ್‌ ಗಳಿಸಿದರು. ಇನ್ನು ಆಲ್‌ರೌಂಡರ್‌ ಮಾರ್ಕೊ ಎನ್ಸೆನ್‌ 84 ರನ್‌ ಗಳಿಸಿ ಭಾರತ ಬೌಲರ್‌ ಗಳನ್ನು ಕಾಡಿದರು. ಬೇರೆ ಯಾರಿಂದಲೂ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 108.4 ಓವರ್‌ಗಳಲ್ಲಿ 408 ರನ್‌ ಗಳಿಸಿ ಸರ್ವಪತನ ಕಂಡಿತು. ಭಾರತಕ್ಕೆ 163 ರನ್‌ ಗಳ ಟ್ರಯಲ್‌ ನೀಡಿತು.

ಟೀಂ ಇಂಡಿಯಾ ಪರ ಬುಮ್ರಾ 4 ವಿಕೆಟ್‌ ಪಡೆದು ಮಿಂಚಿದರು. ಸಿರಾಜ್‌ ಎರಡು ವಿಕೆಟ್‌ ಪಡೆದರೇ, ಅಶ್ವಿನ್‌, ಠಾಕೂರ್‌ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್‌ ಪಡೆದರು.

ಭಾರತ ತಂಡ ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದು, 16.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 17 ರನ್‌ ಬಾರಿಸಿ ಬ್ಯಾಟಿಂಗ್‌ ಆಡುತ್ತಿದೆ. ಕಗಿಸೋ ರಬಾಡ ಮತ್ತು ಬರ್ಜರ್‌ ಒಂದೊಂದು ವಿಕೆಟ್‌ ಪಡೆದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ