ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆರಿಸಿಕೊಂಡು 47.4 ಓವರ್‌ಗಳಲ್ಲಿ 248 ರನ್‌ಗೆ ಆಲ್‌ಔಟ್ ಆಗಿ ಇಂಗ್ಲೆಂಡ್‌ಗೆ 249 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಭಾರತ 38.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತು.
ಇಂಗ್ಲೆಂಡ್ ಇನ್ನಿಂಗ್ಸ್: ಫಿಲಿಪ್ ಸಾಲ್ಟ್ 43, ಬೆನ್ ಡಕೆಟ್ 32, ಜೋ ರೂಟ್ 19, ಹ್ಯಾರಿ ಬ್ರೂಕ್ 0, ಜೋಸ್ ಬಟ್ಲರ್ 52, ಜೇಕಬ್ ಬೆಥೆಲ್ 51, ಲಿಯಾಮ್ ಲಿವಿಂಗ್‌ಸ್ಟನ್ 5, ಬ್ರೈಡನ್ ಕೇರ್ಸ್ 10, ಆದಿಲ್ ರಶೀದ್ 8, ಸಕೀಬ್ ಮಹ್ಮೂದ್ 2 ಹಾಗೂ ಜೋಫ್ರಾ ಆರ್ಚರ್ ಅಜೇಯ 21 ರನ್ ಗಳಿಸಿದರು.
ಭಾರತದ ಪರ ಹರ್ಷಿತ್ ರಾಣಾ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಯಶಸ್ವಿ ಜೈಸ್ವಾಲ್ 15, ರೋಹಿತ್ ಶರ್ಮಾ 2, ಶುಬ್‌ಮನ್ ಗಿಲ್ 87, ಶ್ರೇಯಸ್ ಐಯ್ಯರ್ 59, ಅಕ್ಷರ್ ಪಟೇಲ್ 52, ಕೆಎಲ್ ರಾಹುಲ್ 2, ಹಾರ್ದಿಕ್ ಪಾಂಡ್ಯ ಅಜೇಯ 9 ಹಾಗೂ ರವೀಂದ್ರ ಜಡೇಜಾ ಅಜೇಯ 12 ರನ್ ಗಳಿಸಿದರು.
ಇಂಗ್ಲೆಂಡ್ ಪರ ಸಕೀಬ್ ಮಹ್ಮೂದ್ ಹಾಗೂ ಆದಿಲ್ ರಶೀದ್ ತಲಾ ಎರಡು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಹಾಗೂ ಜೇಕಬ್ ಬೆಥೆಲ್ ತಲಾ ಒಂದೊಂದು ವಿಕೆಟ್ ಪಡೆದರು.





