Mysore
19
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

IND vs ENG 2nd test: ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 67/1

ಆಂಧ್ರ ಪ್ರದೇಶ: ಇಲ್ಲಿನ ವಿಶಾಖಪಟ್ಟಣಂನ ವೈ.ಎಸ್‌ ರಾಜಶೇಖರ ರೆಡ್ಡಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ-ಆಂಗ್ಲರ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 399 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಇಂಗ್ಲೆಂಡ್ ತಂಡ ಮೂರನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 67 ರನ್ ಕಲೆಹಾಕಿದೆ. ಇದರೊಂದಿಗೆ ಇನ್ನು 332 ರನ್​ಗಳ ಹಿನ್ನಡೆಯಲ್ಲಿದೆ.

ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಬೆನ್ ಡಕೆಟ್ 28 ರನ್ ಕಲೆಹಾಕಿ ಅಶ್ವಿನ್​ಗೆ ವಿಕೆಟ್‌ ಒಪಪ್ಪಿಸದರೆ, ಮತ್ತೊಬ್ಬ ಆರಂಭಿಕ ಝಾಕ್ ಕ್ರಾಲಿ 29 ರನ್ ಹಾಗೂ ರೆಹಾನ್ ಅಹ್ಮದ್ 8 ರನ್ ಕಲೆಹಾಕಿ 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮುನ್ನ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ಬೃಹತ್ ಮೊತ್ತ ಕಲೆಹಾಕುವ ಅವಕಾಶ ಹೊಂದಿದ್ದರೂ ಕೇವಲ 255 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್​ಗೆ 399 ರನ್ ಗುರಿ ನೀಡಿತು.

ಟೀಂ ಇಂಡಿಯಾ ಪರ ಆರಂಭಿಕ ಶುಭ್​ಮನ್ ಗಿಲ್ 147 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 104 ರನ್​ಗಳ ಇನ್ನಿಂಗ್ಸ್ ಆಡಿ ತಂಡಕ್ಕೆ ಆಸರೆಯಾದರು. ಆಲ್​ರೌಂಡರ್ ಅಕ್ಷರ್ ಪಟೇಲ್ 45 ರನ್​, ಶ್ರೇಯಸ್ ಅಯ್ಯರ್ ಮತ್ತು ಆರ್ ಅಶ್ವಿನ್ ತಲಾ 29 ರನ್​ ಬಾರಿಸಿದರೆ, ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ 17 ರನ್​ಗಳಿಗೆ ಸುಸ್ತಾದರು. ಇಡೀ ಸರಣಿಯಲ್ಲಿ ರನ್ ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮಾ ಕೇವಲ 13 ರನ್​ಗಳಿಸಿ ಪೆವಿಲಿಯನ್ ದಾರಿಯಿಡಿದರು.

ಇಂಗ್ಲೆಂಡ್ ಪರ ಟಾಮ್ ಹಾರ್ಟ್ಲಿ 4 ವಿಕೆಟ್‌, ರೆಹಾನ್ ಅಹ್ಮದ್ 3 ವಿಕೆಟ್, ಅನುಭವಿ ವೇಗಿ ಜೇಮ್ಸ್ ಅಂಡರ್ಸನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಸ್ಕೋರ್‌ ವಿವರ:
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌: 396/10
ಇಂಗ್ಲೆಂಡ್‌ ಮೊಲದ ಇನ್ನಿಂಗ್ಸ್‌: 253/10
ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌: 255/10
ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌: 67/1 (ನಾಲ್ಕನೇ ದಿನಕ್ಕೆ ಆಟ ಕಾಯ್ದಿರಿಸಲಾಗಿದೆ.)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ