Mysore
22
few clouds

Social Media

ಬುಧವಾರ, 07 ಜನವರಿ 2026
Light
Dark

IND vs ENG 1st test: ಟೀಂ ಇಂಡಿಯಾಗೆ 28 ರನ್‌ಗಳ ಸೋಲು!

ಹೈದರಾಬಾದ್​: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 28 ರನ್​ಗಳ ಸೋಲು ಅನುಭವಿಸಿದೆ.

ಈ ಪಂದ್ಯದ ಗೆಲುವಿನೊಂದಿಗೆ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ 231ರನ್‌ ಗುರಿ ನೀಡಿದ ಇಂಗ್ಲೆಂಡ್‌, ಟೀಂ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 202 ರನ್‌ ಗಳಿಗೆ ಆಲ್‌ಔಟ್‌ ಆಗುವ ಮೂಲಕ 28 ರನ್‌ ಗಳಿಂದ ಸೋಲನುಭವಿಸಿತು.

ಟೀಂ ಇಂಡಿಯಾ ಪರವಾಗಿ ನಾಯಕ ರೋಹಿತ್‌ ಶರ್ಮಾ 39 ರನ್‌ ಗಳಿಸಿದ್ದೇ ತಂಡದ ಪರವಾಗಿ ಅತಿಹೆಚ್ಚು ರನ್‌. ಕಳೆದ ಪಂದ್ಯದಲ್ಲಿ ವಿವಾದಾತ್ಮಕವಾಗಿ ಔಟಾಗಿದ್ದ ಜಡೇಜಾ, ಈ ಪಂದ್ಯದಲ್ಲಿ ರನ್‌ಔಟ್‌ ಆಗಿ ಹೊರನಡೆದರು.

ಇಂಗ್ಲೆಂಡ್‌ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಟಾಮ್‌ ಹಾರ್ಟ್ಲಿ 7 ವಿಕೆಟ್‌ ಪಡೆದು ಭಾರತ ತಂಡದಿಂದ ಗೆಲುವನ್ನು ಕಸಿದುಕೊಂಡರು.

ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ಒಲಿ ಪೋಪ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್‌:

ಇಂಗ್ಲೆಂಡ್‌: ಮೊಲದ ಇನ್ನಿಂಗ್ಸ್‌ 246 ಮತ್ತು ಎರಡನೇ ಇನ್ನಿಂಗ್ಸ್‌ 420
ಟೀಂ ಇಂಡಿಯಾ: ಮೊಲದ ಇನ್ನಿಂಗ್ಸ್‌ 436 ಮತ್ತು ಎರಡನೇ ಇನ್ನಿಂಗ್ಸ್‌ 202

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!