Mysore
27
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

IND vs AUS 2ನೇ ಟಿ20: ಭಾರತಕ್ಕೆ 44 ರನ್‌ ಗೆಲುವು

ತಿರುವನಂತಪುರಂ : ಜೈಸ್ವಾಲ್‌, ಗಾಯಕ್ವಾಡ್‌ ಮತ್ತು ಇಶಾನ್‌ ಕಿಸಾನ್‌ ಆವರ ಅಮೊಘ ಅರ್ಧ ಶತಕ ಮತ್ತು ರವಿ ಬಿಷ್ನೋಯಿ ಹಾಗೂ ಪ್ರಸಿದ್ದ್‌ ಕೃಷ್ಣ ಅವರ ಬೌಲಿಂಗ್‌ ದಾಳಿಗೆ ನಲುಗಿದ ಮ್ಯಾಥ್ಯೂ ವೇಡ್‌ ಪಡೆ ಸತತ ಎರಡನೇ ಸೋಲಿನ ಕಹಿ ಉಂಡಿತು.

ಇಲ್ಲಿನ ಗ್ರೀನ್‌ಫೀಲ್ಡ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ 20 ಓವರ್‌ ಬ್ಯಾಟಿಂಗ್‌ ಮಾಡಿ 4 ವಿಕೆಟ್‌ ಕಳೆದಕೊಂಡು 235 ರನ್‌ಗಳ ಬೃಹತ್‌ ಗುರಿಯನ್ನು ನೀಡಿತ್ತು, ಈ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ 191 ರನ್‌ ಕಲೆಹಾಕಿ, 44 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಭಾರತ ತಂಡ ಗೆಲುವು ಪಡೆಯುವ ಮೂಲಕ ಸೀರಿಸ್‌ನಲ್ಲಿ 2-0 ಸತತ ಎರಡನೇ ಗೆಲುವು ದಾಖಲಿಸಿತು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಸೂರ್ಯಕುಮಾರ್‌ ಬಳಗಕ್ಕೆ ಭರ್ಜರಿ ಆರಂಭ ದೊರೆಯಿತು. ಆಸೀಸ್‌ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದ ಯಶಸ್ವಿ ಜೈಸ್ವಾಲ್‌ ಮತ್ತು ಋತುರಾಜ್‌ ಗಾಯಕ್ವಾಡ್‌ ಪವರ್‌ ಪ್ಲೇ ಒಳಗಡೆಯೇ 77 ರನ್‌ ಬಾರಿಸಿದರು. ಕೇವಲ ೩೫ ಎಸೆತ ಎದುರಿಸಿದ ಜೈಸ್ವಾಲ್‌ 9 ಬೌಂಡರಿ ಹಾಗೂ 2 ಸಿಕ್ಸರ್‌ ಮೂಲಕ 53 ರನ್‌ ಗಳಿಸಿದರೇ, ಇತ್ತ 43 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ ಮೂಲಕ 58 ರನ್‌ ಕಲೆಹಾಕಿದರು. ಪವರ್‌ ಪ್ಲೇ ಒಳಗಡೆಯೇ ಅರ್ಧ ಶತಕ ಮಾಡಿ ನಿರ್ಗಮಿಸಿದ ಜೈಸ್ವಾಲ್‌ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಇಶಾನ್‌ ಅವರು 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ ಮೂಲಕ 52 ರನ್‌ ಬಾರಿಸಿದರು.

ಕೊನೆಯಲ್ಲಿ ಆಕ್ರಮಣಕಾರಿ ಆಟವಾಡಿದ ರಿಂಕು ಸಿಂಗ್‌ ಅವರು ಕೇವಲ 9 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ ಮೂಲಕ 31 ರನ್‌ ಗಳಿಸಿದರು.

ಆಸೀಸ್‌ ಪರ ನಥನ್‌ ಏಲಿಸ್‌3, ಸ್ಟೋಯ್ನಿಸ್‌ 1 ವಿಕೆಟ್‌ ಪಡೆದರು.

235 ರನ್‌ಗ ಬೃಹತ್‌ ಮೊತ್ತ ಬೆನ್ನಟ್ಟಿದ ಆಸೀಸ್‌ ತಂಡಕ್ಕೆ ನಿರೀಕ್ಷಿತ ಆರಂಭ ದೊರೆಯಲಿಲ್ಲ, ತಂಡ 35 ರನ್‌ ಗಳಿಸುವಷ್ಟರಲ್ಲೇ ಮ್ಯಾಥ್ಯೂ ಶಾರ್ಟ್‌ (19) ಪ್ರಸಿದ್ಧ್‌ ಅವರಿಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಸ್ಟೀವ್‌ ಸ್ಮತ್‌ (19), ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಜೋಶ್‌ ಇಂಗ್ಲಿಸ್‌ ಕೇವಲ 1 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಗ್ಲೇನ್‌ ಮ್ಯಾಕ್ಸ್‌ವೆಲ್‌ (12), ಬೇಗನೇ ವಿಕೆಟ್‌ ಒಪ್ಪಿಸಿದರು.

ನಂತರ ಜೊತೆಯಾದ ಸ್ಟೋಯ್ನಿಸ್‌(45) ಮತ್ತು ಟಿಮ್‌ ಡೆವಿಡ್‌(37) ಜೊತೆಗೂಡಿ 81 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಕೊನೆಯಲ್ಲಿ ನಾಯಕ ಮ್ಯಾಥ್ಯೂ ವೇಡ್‌ ಅವರು 23 ಎಸೆತಗಳಲ್ಲಿ 43 ರನ್‌ ಗಳಿಸಿ ಕೊನೆಯಲ್ಲಿ ಹೋರಾಟ ನಡೆಸಿದರು. ಬೇರಾರಿಂದಲೂ ದಿಟ್ಟ ಹೋರಾಟ ನಡೆಯಲಿಲ್ಲ. ಅಂತಿಮವಾಗಿ ಆಸೀಸ್‌ 191 ರನ್‌ ಗಳಿಸಿ 44 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಭಾರತ ಪರ ಪ್ರಸಿದ್ಧ್‌ ಕೃಷ್ಣ ಮತ್ತು ರವಿ ಬಿಷ್ನೋಯಿ ತಲಾ 3 ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!