Mysore
22
scattered clouds

Social Media

ಶುಕ್ರವಾರ, 14 ಮಾರ್ಚ್ 2025
Light
Dark

IND v/s AUS: ಫೈನಲ್‌ನತ್ತ ಎರಡು ಟೀಂಗಳ ಚಿತ್ತ

ದುಬೈ: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಆಸ್ರೇಲಿಯಾ ಮುಖಾಮುಖಿಯಾಗಲಿದ್ದು, ಫೈನಲ್‌ನತ್ತ ಎರಡು ತಂಡಗಳು ಚಿತ್ತ ನೆಟ್ಟಿವೆ.

ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ಕಾಳಗದಲ್ಲಿ ಆಸೀಸ್‌ ತಂಡವೇ ಮೇಲುಗೈ ಸಾಧಿಸಿದೆ.

ಭಾರತ ತಂಡವು ತನ್ನ ಗುಂಪು ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಆತ್ಮವಿಶ್ವಾಸದಲ್ಲಿದೆ. ಇದಕ್ಕೆ ಪೂರಕವಾಗಿ ತಂಡದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌ ಬಾಂಗ್ಲಾ ವಿರುದ್ಧ ಶತಕ ಬಾರಿಸಿದರೆ, ವಿರಾಟ್‌ ಪಾಕಿಸ್ತಾನದ ವಿರುದ್ದ ಶತಕ ಬಾರಿಸಿ ಜಯಕ್ಕೆ ಕಾರಣರಾಗಿದ್ದರು.

ಬೌಲಿಂಗ್‌ ವಿಭಾಗದಲ್ಲಿ ಬಾಂಗ್ಲಾ ವಿರುದ್ಧ ಮೊಹಮ್ಮದ್‌ ಶಮಿ, ನ್ಯೂಜಿಲೆಂಡ್‌ ವಿರುದ್ಧ ವರುಣ್‌ ಚಕ್ರವರ್ತಿ ಹೊರತುಪಡಿಸಿ ಉಳಿದ ಬೌಲರ್‌ಗಳಿಂದ ಹೇಳಿಕೊಳ್ಳುವಂತ ಪ್ರದರ್ಶನ ಇಲ್ಲಿವರೆಗೂ ಬಂದಿಲ್ಲ.

ಇತ್ತ ಆಸ್ಟ್ರೇಲಿಯಾ ತಂಡ ಅನುಭವಿ ಆಟಗಾರರ ಕೊರತೆ ಎದುರಿಸುತ್ತಿದೆ. ಗಾಯದ ಸಮಸ್ಯೆಯಿಂದ ಜೋಶ್‌ ಹ್ಯಾಜಲ್‌ವುಡ್‌, ಮಿಚೆಲ್‌ ಸ್ಟಾರ್ಕ್‌, ಮಿಚೆಲ್‌ ಮಾರ್ಷ್‌, ಮತ್ತು ಪ್ಯಾಟ್‌ ಕಮಿನ್ಸ್‌ ದೂರವುಳಿದಿದ್ದು, ಅಫ್ಗಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್‌ ಮ್ಯಾಥ್ಯು ಶಾರ್ಟ್‌ ಕೂಡ ಗಾಯಗೊಂಡಿರುವುದು ನಾಯಕ ಸ್ಟೀವ್‌ ಸ್ಮಿತ್‌ಗೆ ತಲೆನೋವಾಗಿ ಪರಿಣಮಿಸಿದೆ.

ಬೌಲಿಂಗ್‌ ವಿಭಾಗದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದ್ದು, ಹೊಸ ಆಟಗಾರರನ್ನೇ ನೆಚ್ಚಿಕೊಂಡು ಆಸ್ಟ್ರೇಲಿಯಾ ಕಣಕ್ಕೆ ಇಳಿಯಬೇಕಿದೆ.

ತಂಡಗಳು ಹಿಂತಿವೆ:

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌), ಅಕ್ಷರ್‌ ಪಟೇಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌, ಅರ್ಷದೀಪ್‌ ಸಿಂಗ್‌, ಹರ್ಷಿತ್‌ ರಾಣಾ.

ಆಸ್ರೇಲಿಯಾ: ಸ್ಟೀವ್‌ ಸ್ಮಿತ್‌ (ನಾಯಕ), ಜೋಶ್‌ ಇಂಗ್ಲಿಸ್‌, ಟ್ರಾವಿಸ್‌ ಹೆಡ್‌, ಮಾರ್ನಸ್‌ ಲಾಬುಶೇನ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ ಕೀಪರ್‌), ಗ್ಲೇನ್‌ ಮ್ಯಾಕ್ಸವೆಲ್‌, ಬೆನ್‌ ಡ್ವಾರ್ಶಿಸ್‌, ನಾಥನ್‌ ಎಲ್ಲಿಸ್‌, ಆಡಂ ಜಂಪಾ, ಸ್ಪೆನ್ಸರ್‌ ಜಾನ್ಸನ್‌, ಸೀನ್‌ ಅಬಾಟ್‌, ಆರನ್‌ ಹಾರ್ಡಿ, ತನ್ವೀರ್‌ ಸಂಗಾ, ಕೂಪರ್‌ ಕೋನ್ನೊಲಿ, ಜೇಕ್‌-ಫ್ರೇಶರ್‌ ಮೆಕ್‌ಗುರ್ಕ್‌.

ಪಂದ್ಯ ಆರಂಭ: ನಾಳೆ ಮಧ್ಯಾಹ್ನ 2:30 PM

ಸ್ಥಳ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ, ದುಬೈ

ನೇರ ಪ್ರಸಾರ: ಜಿಯೊ ಹಾಟ್‌ಸ್ಟಾರ್‌, ಹಾಟ್‌ಸ್ಟಾರ್‌ ನೆಟ್‌ವರ್ಕ್‌, ಸ್ಟಾರ್‌ ಸ್ಪೋರ್ಟ್ಸ್‌

 

 

Tags: