Mysore
27
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಟಿ20 ವಿಶ್ವಕಪ್‌ ಗೆದ್ದರೆ ಪಾಕಿಸ್ತಾನ್‌ ಆಟಗಾರರಿಗೆಲ್ಲ ಬಂಪರ್‌ ಬಹುಮಾನ

ಪಾಕಿಸ್ತಾನ್/ಕರಾಚಿ : ಇದೇ ಜೂನ್‌ 1ರಿಂದ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್‌ ಸಹಯೋಗದಲ್ಲಿ ನಡೆಯುವ ಟಿ20 ವಿಶ್ವಕಪ್‌ ಟೂರ್ನಿಯನ್ನು ಪಾಕಿಸ್ತಾನ್‌ ಗೆದ್ದರೇ ತಂಡ ಪ್ರತಿಯೊಬ್ಬ ಸದಸ್ಯರಿಗೂ ತಲಾ 1 ಲಕ್ಷ ಡಾಲರ್‌ (ಭಾರತೀಯ ರೂ.ಗಳಲ್ಲಿ 83 ಲಕ್ಷ) ಸಿಗಲಿದೆ ಎಂದು ಸ್ವತಃ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಭಾನುವಾರ ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನ್‌ ತಂಡ ವಿಶ್ವಕಪ್‌ ಮುಂಚಿತವಾಗಿ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿಗೆ ತೆರಳುವ ಮುನ್ನಾ ಎರಡು ಗಂಟೆಗಳ ಕಾಲ ಪಿಸಿಬಿ ಅಧ್ಯಕ್ಷ ಪಾಕ್‌ ಆಟಗಾರರೊಂದಿಗೆ ಚರ್ಚಿಸಿ ಮಹತ್ವದ ಘೋಷಣೆ ಮಾಡಿದ್ದಾರೆ.

ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಡಿ, ಪಾಕಿಸ್ತಾನಕ್ಕಾಗಿ ಬಹಳ ಸ್ಫೂರ್ತಿಯಿಂದ ಆಟವಾಡಿ ದೇವರ ಇಚ್ಛೆಯಂತೆ ನಮ್ಮ ತಂಡ ವಿಜಯ ಸಾಧಿಸಲಿದೆ. ಜೊತೆಗೆ ತಂಡದಲ್ಲಿ ಆಟಗಾರರ ನಡುವೆ ಒಳ್ಳೆಯ ಬಾಂಧವ್ಯವಿದ್ದು, ಈ ಟೂರ್ನಿಯಲ್ಲಿ ವೇಗಿ ಶಾಹೀನ್‌ ಶಾ ಅಫ್ರೀದಿ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

https://x.com/TheRealPCB/status/1787125806495408147

Tags:
error: Content is protected !!