Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ICC t20 worldcup: ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಸಿದ್ದ; ಈ ಬಾರಿಯೂ ಬಾಬರ್‌ಗೆ ಸಾರಥ್ಯ?

ವೆಸ್ಟ್‌ ಇಂಡೀಸ್‌, ಅಮೇರಿಕಾ ಸಹಭಾಗಿತ್ವದಲ್ಲಿ ಇದೇ ಜೂನ್‌.2ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ್‌ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ಬಹು ನಿರೀಕ್ಷಿತ ಇಂಡಿಯಾ-ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಕದನ ಜೂನ್‌.9 ರಂದು ನ್ಯೂಯಾರ್ಕ್‌ನ ಹೊಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಳೆದ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ಈ ಬಾರಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಅಖಾಡಕ್ಕೆ ಇಳಿದಿದೆ. ಈ ಬಾರಿಯೂ ಪಾಕ್‌ಗೆ ಬಾಬರ ಅಜಂ ಸಾರಥ್ಯ ವಹಿಸಲಿದ್ದಾರೆ. ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಹಸನ್‌ ಅಲಿಗೆ ಟಿಕೆಟ್‌ ಕೈ ತಪ್ಪಿದರೇ ಅವರ ಬದಲಾಗಿ ಹ್ಯಾರಿಸ್‌ ರೌಫ್‌ ಅವರಿಗೆ ಪಾಕ್‌ ಕ್ರಿಕೆಟ್‌ ಮಂಡಳಿ ಮಣೆ ಹಾಕಿದೆ.

ಅಚ್ಚರಿಯಂಬತೆ ಈ ಟಿ20 ವಿಶ್ವಕಪ್‌ಗೆ ಪಾಕ್‌ನ ವೇಗಿ ಮೊಹಮ್ಮದ್‌ ಅಮೀರ್‌ ಅವರು ಕಂಬ್ಯಾಕ್‌ ಮಾಡಿದ್ದಾರೆ. ಇವರು ನಾಲ್ಕು ವರ್ಷಗಳ ಹಿಂದೆಯೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಹಾಗಯೇ ಇನ್ನೊಬ್ಬ ಆಲ್‌ರೌಂಡ್‌ ಇಮಾದ್‌ ವಾಸಿಂ ಕೂಡಾ ಕಳೆದ ವರ್ಷ ನಿವೃತ್ತಿ ಘೋಷಿಸಿದ್ದರು. ಅವರನ್ನು ಸಹಾ ತಂಡಕ್ಕೆ ವಾಪಸ್‌ ಕರೆಸಲಾಗಿದೆ.

ಮತ್ತು ತಂಡದಲ್ಲಿ ಯುವ ಆಟಗಾರರಾದ ಉಸ್ಮಾನ್‌ ಖಾನ್‌, ಮಧ್ಯಮ ಕ್ರಮಾಂಕದ ಬ್ಯಾಟರ್‌ ಮಹಮ್ಮದ್‌ ಇರ್ಫಾನ್‌ ಖಾನ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿ ಹೇಗಾದರೂ ಮಾಡಿ ಟೀಂ ಇಂಡಿಯಾವನ್ನು ಮಣಿಸಬೇಕು ಎಂಬ ಛಲದೊಂದಿಗೆ ಪಾಕ್‌ ಅನುಭವಿ ಆಟಗಾರರನ್ನೊಳಗೊಂಡ ತಂಡವನ್ನು ವಿಶ್ವಕಪ್‌ಗೆ ಕಳುಹಿಸಿದ್ದಾರೆ. ಟಿ20 ವಿಶ್ವಕಪ್‌ನ ಪಾಕ್‌-ಇಂಡಿಯಾ ಪಂದ್ಯ ಮಹತ್ವ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಪಾಕ್‌ ಪ್ಲೇಯಿಂಗ್‌ 15 ಈ ಕೆಳಕಂಡಂತಿದೆ.

ಬಾಬರ್‌ ಅಜಂ (ನಾಯಕ), ಮೊಹಮ್ಮದ್‌ ರಿಜ್ವಾನ್‌(ವಿ.ಕೀ), ಅಬ್ರಾರ್‌ ಅಹ್ಮದ್‌, ಆಝಂ ಖಾನ್‌, ಫಖರ್‌ ಜಮಾನ್‌, ಹ್ಯಾರಿಸ್‌ ರೌಫ್‌, ಇಫ್ತಿಕರ್‌ ಅಹ್ಮದ್‌, ಇಮಾದ್‌ ವಾಸಿಂ, ಅಬ್ಬಾಸ್‌ ಅಫ್ರಿದಿ, ಮೊಹಮ್ಮದ್‌ ಅಮೀರ್‌, ನಸೀಮ್‌ ಶಾ, ಸೈಮ್‌ ಆಯೂಬ್‌, ಶದಾಬ್‌ ಖಾನ್‌, ಶಾಹಿನ್‌ ಶಾ ಅಫ್ರಿದಿ, ಉಸ್ಮಾನ್‌ ಖಾನ್‌

Tags:
error: Content is protected !!