Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ICC T20 worldcup: ಟೀಂ ಇಂಡಿಯಾ ವೇಳಾಪಟ್ಟಿ; ಈ ದಿನದಂದು ಪಾಕ್‌ ವಿರುದ್ಧ ಕಾದಾಟ

ವೆಸ್ಟ್‌ ಇಂಡೀಸ್‌ ಹಾಗೂ ಅಮೇರಿಕಾ ಸಹಭಾಗಿತ್ವದಲ್ಲಿ ಇದೇ ಜೂನ್‌ 2ರಿಂದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಈ ಬಾರಿಯ ವಿಶ್ವಕಪಪ್‌ನಲ್ಲಿ 20 ತಂಡಗಳು ಅಖಾಡಕ್ಕಿಳಿದಿವೆ.

20 ತಂಡಗಳ ಪೈಕಿ 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್‌ 9ರಂದು ಸಾಂಪ್ರಾದಾಯಿಕ ವೈರಿಗಳ ಕಾದಾಟ ನಡೆಯಲಿದೆ.

ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಜೂನ್‌ 5ರಿಂದ ಆರಂಭಿಸಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಎದುರಿಸಲಿರುವ ತಂಡಗಳಾವುವು, ಸ್ಥಳ, ದಿನಾಂಕ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟೀಂ ಇಂಡಿಯಾ ಐರ್ಲೆಂಡ್‌ ವಿರುದ್ಧ ತನ್ನ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ವೇಳಾಪಟ್ಟಿ ಇಂತಿದೆ.

ಮೊದಲ ಪಂದ್ಯ: ಜೂನ್‌. 5- ಟೀಂ ಇಂಡಿಯಾ vs ಐರ್ಲೆಂಡ್‌
ಸ್ಥಳ: ನ್ಯೂಯಾರ್ಕ್‌ನ ನಸ್ಸೌ ಕ್ರೀಡಾಂಗಣ.

ಎರಡನೇ ಪಂದ್ಯ: ಜೂನ್‌.9- ಟೀಂ ಇಂಡಿಯಾ vs ಪಾಕಿಸ್ತಾನ್‌
ಸ್ಥಳ: ನ್ಯೂಯಾರ್ಕ್‌ನ ನಸ್ಸೌ ಕ್ರೀಡಾಂಗಣ.

ಮೂರನೇ ಪಂದ್ಯ: ಜೂನ್‌. 12- ಟೀಂ ಇಂಡಿಯಾ vs ಯುಎಸ್‌ಎ
ಸ್ಥಳ: ನ್ಯೂಯಾರ್ಕ್‌ನ ನಸ್ಸೌ ಕ್ರೀಡಾಂಗಣ.

ನಾಲ್ಕನೇ ಪಂದ್ಯ: ಜೂನ್‌. 15- ಟೀಂ ಇಂಡಿಯಾ vs ಕೆನಡಾ
ಸ್ಥಳ: ಲಾಡರ್ಹಿಲ್‌ ನ ಸೆಂಟ್ರಲ್‌ ಬ್ರೋವರ್ಡ್‌ ಪಾರ್ಕ್‌ ಕ್ರೀಡಾಂಗಣ

ನಾಕ್‌ಔಟ್‌ ಹಾಗೂ ಸೆಮಿ ಫೈನಲ್‌ ಹಾದಿ ಹೀಗಿದೆ: ಈ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಅವುಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ನಾಲ್ಕು ಗುಂಪುಗಳಲ್ಲಿ ಮೊದಲೆರೆಡು ಸ್ಥಾನ ಪಡೆವ ಎರಡು ತಂಡಗಳು ಸೂಪರ್‌-8 ಹಂತಕ್ಕೆ ತಲುಪಲಿವೆ. ಅಲ್ಲಿಂದ ಗೆದ್ದ ತಂಡಗಳು ಸೆಮಿಸ್‌ಗೆ ಅರ್ಹತೆ ಪಡೆಯಲಿವೆ.

Tags: