ನವದೆಹಲಿ: ಇದೇ ಜೂನ್ ಒಂದರಿಂದ ಆರಂಭವಾಗಲಿರುವ ICC t20 worldcup ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಲಾಗಿದೆ. ಈ ಬಾರಿ ಅಚ್ಚರಿಯಂಬಂತೆ ಸಂಜು ಸ್ಯಾಮ್ಸನ್ ಹಾಗೂ ಸಿಎಸ್‌ಕೆ ತಡದ ಬಿಗ್ ಹಿಟ್ಟರ್ ಶಿವಂ ದುಬೆ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಈ ಟೂರ್ನಿಗೂ ಕೂಡಾ ರೋಹಿತ್ ಶರ್ಮಾ ನಾಯಕರಾಗಿ ಮುಂದುವರೆಯಲಿದ್ದಾರೆ. ಉಪ ನಾಯಕನಾಗಿ ಹಾರ್ದಿಕ್ ಪಾಂಡ್ಯ ನೇಮಕಗೊಂಡಿದ್ದಾರೆ. ಅಪಘಾತದಿಂದ ಹೊರಬಂದಿರುವ ವಿಕೇಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ಕನ್ನಡಿಕ ಕೆ.ಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ತಂಡದ ಸಾರಥ್ಯ ರೋಹಿತ್ ಶರ್ಮಾ ವಹಿಸಿದರೇ, ಇವರಿಗೆ ಜೊತೆಯಾಗಿ ಕನ್ನಡಿಗ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ಇರಲಿದ್ದಾರೆ. ಕೋಚ್ ದ್ರಾವಿಡ್ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿ ಬಳಿಕ ತಂಡವನ್ನು ಅಂತಿಮಗೊಳಿಸಿದ್ದಾರೆ.
ಟೀ ಇಂಡಿಯಾ ತಂಡಕ್ಕೆ ಯಜುವೇಂದರ್ ಚಾಹಲ್ ಕಮ್‌ಬ್ಯಾಕ್ ಮಾಡಿದ್ದಾರೆ. ವಿಶ್ವಕಪ್ ನಂತರ ಯಾವುದೇ ಪಂದ್ಯಗಳನ್ನು ಆಡದ ಮೊಹಮದ್ ಶಮಿ ವಿಶ್ವಕಪ್ ಟೂರ್ನಿಗೂ ಅಲಭ್ಯರಾಗಿದ್ದಾರೆ.
ಒಟ್ಟು ಹದಿನೈದು ಆಟಗಾರರನ್ನೊಳಗೊಂಡ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿಗಳಿಗಿಂತ ಯುವಕರಿಗೆ ಹೆಚ್ಚಿನ ಮಣೆ ಹಾಕಲಾಗಿದೆ.
ಟೀಂ ಇಂಡಿಯಾ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿ.ಕೀ), ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿ.ಕೀ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್ ಯಾದವ್, ಯಜುವೇಂದರ್ ಚಾಹಲ್, ಅಕ್ಷರ್ ಪಟೇಲ್, ಮೊಹಮದ್ ಸಿರಾಜ್
https://x.com/BCCI/status/1785250931166060585
ಬೆಂಚ್: ಶುಭ್‌ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್
ICC t20 ವಿಶ್ವಕಪ್ ಇದೇ ಜೂನ್ 1 ರಿಂದ ಆರಂಭವಾಗಲಿದ್ದು, ಈ ಟೂರ್ನಿ ಇದೇ ಜೂನ್ 29 ರಂದು ಅಂತ್ಯವಾಗಲಿದೆ. ಇನ್ನು ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಪಂದ್ಯವಾಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
2013 ರಿಂದ ಆಚೆಗೆ ಟೀಂ ಇಂಡಿಯಾ ಈವರೆಗೆ ಯಾವುದೇ ಕಪ್ ಗೆದ್ದಿಲ್ಲ. 2023 ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ತವರಿನಂಗಳದಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಈ ವಿಶ್ವಕಪ್ ಗೆದ್ದು, ಟ್ರೋಫಿ ಬರ ನೀಗಿಸಲಿದೆಯಾ ಟೀಂ ಇಂಡಿಯಾ ಎಂಬುದನ್ನು ಕಾದು ನೋಡಬೇಕಿದೆ.