ಸೇಂಟ್ ವಿನ್ಸೆಂಟ್: ಇಲ್ಲಿನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಸೀಸ್ ತಂಡ ಮಾಜಿ ನಾಯಕ ಪ್ಯಾಟ್ ಕಮಿನ್ಸ್ ನೂತನ ವಿಶ್ವ ದಾಖಲೆ ನಿರ್ಮಿಸಿದರು.
ಟಿ20 ವಿಶ್ವಕಪ್ ಟೂರ್ನಿಯೊಂದರಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗುವ ಮೂಲಕ ಪ್ಯಾಟ್ ಕಮಿನ್ಸ್ ನೂತನ ದಾಖಲೆ ರಚಿಸಿದರು.
ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಒಟ್ಟು 7 ಜನರು ಮಾತ್ರ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಆದರೆ ಪ್ಯಾಟ್ ಕಮಿನ್ಸ್ ಮಾತ್ರ ಒಂದೇ ಆವೃತ್ತಿಯಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಗೊಂಚಲು ಕಿತ್ತಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಮೊದಲ ಹ್ಯಾಟ್ರಿಕ್ ಪಡೆದಿದ್ದ ಕಮಿನ್ಸ್ ಬಳಿಕ ಇಂದು (ಜೂನ್..23) ರಂದು ನಡೆದ ಅಫ್ಘಾನ್ ಮತ್ತು ಆಸೀಸ್ ನಡುವಿನ ಪಂದ್ಯದಲ್ಲಿ ಮತ್ತೊಮ್ಮೆ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
18ನೇ ಓವರ್‌ನ ಕೊನೆಯ ಎಸೆತದಲ್ಲಿ ಅಫ್ಘಾನ್ ನಾಯಕ ರಶೀದ್ ಖಾನ್ ಅವರನ್ನು ಔಟ್ ಮಾಡಿದರು. ಮತ್ತು 20ನೇ ಓವರ್ ಮೊದಲೆರೆಡು ಎಸೆತಗಳಲ್ಲಿ ಕರೀಮ್ ಜನ್ನತ್ ಹಾಗೂ ಗುಲ್ಬದೀನ್ ನೈಬ್ ಅವರನ್ನು ಪೆವಿಲಿಯನ್‌ನತ್ತ ಕಳುಹಿಸುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನ್ 149ರನ್ ಗಳ ಗುರಿಯನ್ನು ಆಸೀಸ್ ತಂಡಕ್ಕೆ ನೀಡಿತು. ಇನ್ನು ಈ ಮೊತ್ತ ಬೆನ್ನತ್ತುವಲ್ಲಿ ವಿಫಲರಾದ ಆಸ್ಟ್ರೇಲಿಯಾ ಆಟಗಾರರು ಆಲ್ಔಟ್ ಆಗುವ ಮೂಲಕ ಕೇವಲ 127ರನ್ ಗಳಿಸಿ 21ರನ್‌ಗಳ ಅಂತರದಿಂದ ಸೋಲು ಕಂಡರು.





