Mysore
27
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ICC T20 WC FINAL| ವಿರಾಟ್‌ ಅರ್ಧಶತಕ; ದ.ಆಫ್ರಿಕಾಗೆ ಸವಾಲಿನ ಗುರಿ ನೀಡಿದ ಭಾರತ!

ಬಾರ್ಬಡೋಸ್‌: ಇಲ್ಲಿನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 176 ರನ್‌ ಬಾರಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನೀಡಿತು.

ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಟೀಂ ಇಂಡಿಯಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿತು. ಹರಿಣಗಳ ಶಿಸ್ತುಬದ್ಧ ಬೌಲಿಂಗ್‌ ದಾಳಿಗೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾದ ರನ್‌ ಮೆಷಿನ್‌ ಬ್ಯಾಟ್‌ ಬೀಸಿದರು. ನಿಧಾನಗತಿಯಿಂದ ಇನ್ನಿಂಗ್ಸ್‌ ಕಟ್ಟಿದ ವಿರಾಟ್‌ 59 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 76 ರನ್‌ ಗಳಿಸಿದರು. ಇವರಿಗೆ ಶಿವಂ ದುಬೆ 27(16) ರನ್‌ ಬಾರಿಸಿ ಸಾಥ್‌ ನೀಡಿದರು.

ಉಳಿದಂತೆ ಅಕ್ಷರ್‌ ಪಟೇಲ್‌ 47(31) ರನ್‌, ನಾಯಕ ರೋಹಿತ್‌ ಶರ್ಮಾ 9(5) ರನ್‌, ರಿಷಭ್‌ ಪಂತ್‌ ಡಕ್‌ಔಟ್‌, ಸೂರ್ಯಕುಮಾರ್‌ ಯಾದವ್‌ 3(4)ರನ್‌, ಹಾರ್ದಿಕ್‌ ಪಾಂಡ್ಯ ಔಟಾಗದೇ 5(2) ರನ್‌, ರವೀಂದ್ರ ಜಡೇಜಾ 2(2) ರನ್‌ ಕಲೆಹಾಕಿದರು.

ದಕ್ಷಿಣ ಆಫ್ರಿಕಾ ಪರ ಕೇಶವ್‌ ಮಹಾರಾಜ್‌ ಹಾಗೂ ನೋಕಿಯೋ 2, ರಬಾಡ ಮತ್ತ ಮಾರ್ಕೋ ಎನ್ಸರ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

Tags:
error: Content is protected !!