ಭಾರತ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ರವಿ ಬಿಷ್ಣೋಯಿ ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಅವರನ್ನು ಹಿಂದಿಕ್ಕಿ ಐಸಿಸಿ ಟಿ 20 ಕ್ರಿಕೆಟ್ ಅತ್ಯುತ್ತಮ ಬೌಲರ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 5 ಪಂದ್ಯಗಳನ್ನಾಡಿ 9 ವಿಕೆಟ್ ಪಡೆದುಕೊಂಡಿದ್ದರು.
ಈ ಸರಣಿಯಲ್ಲಿ ರವಿ ಬಿಷ್ಣೋಯಿ ಪಡೆದ ಈ ವಿಕೆಟ್‌ಗಳಿಂದಲೇ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ. ಸದ್ಯ 699 ಪಾಯಿಂಟ್ಸ್ ಪಡೆದುಕೊಂಡಿರುವ ರವಿ ಬಿಷ್ಣೋಯಿ ಒಂದನೇ ಸ್ಥಾನದಲ್ಲಿದ್ದರೆ, 692 ಅಂಕಗಳನ್ನು ಪಡೆದಿರುವ ರಶೀದ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ. ವನಿಂದು ಹಸರಂಗ ಮೂರನೇ ಸ್ಥಾನ, ಆದಿಲ್ ರಶೀದ್ ನಾಲ್ಕನೇ ಸ್ಥಾನ ಹಾಗೂ ಮಹೀಶ್ ತೀಕ್ಷಣ ಐದನೇ ಸ್ಥಾನದಲ್ಲಿದ್ದಾರೆ. ಫೆಬ್ರವರಿ 2022ರಲ್ಲಿ ಟಿ ಟ್ವೆಂಟಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರವಿ ಬಿಷ್ಣೋಯಿ ಇಲ್ಲಿಯವರೆಗೂ ಒಟ್ಟು 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ.





