ಐಸಿಸಿ (ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್)ಯು ಇಂದು(ಮಂಗಳವಾರ) ವರ್ಷದ ಏಕದಿನ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಬರೋಬ್ಬರಿ ಆರು ಜನ ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.
ವರ್ಷದ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ನೇಮಕಗೊಂಡಿದ್ದಾರೆ. 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ರೋಹಿತ್ ನಾಯಕತ್ವದಲ್ಲಿ ಅಗಮ್ಯ ಸಾಧನೆ ತೋರಿತ್ತು. ಈ ಸಲುವಾಗಿ ವರ್ಷದ ಏಕದಿನ ತಂಡಕ್ಕೆ ರೋಹಿತ್ ನಾಯಕರಾಗಿದ್ದಾರೆ.
ಉಳಿದಂತೆ ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ತಂಡದಲ್ಲಿದ್ದಾರೆ. ನ್ಯೂಜಿಲೆಂಡ್ಸ್‌ನ ಆಲ್‌ರೌಂಡರ್ ಡೇರಿಯಲ್ ಮಿಚೆಲ್, ದಕ್ಷಿಣ ಆಫ್ರಿಕಾದ ವಿಕೇಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಮತ್ತು ಬೌಲರ್ ಮಾರ್ಕೋ ಎನ್ಸನ್, ಆಸೀಸ್ ತಂಡದ ಎಡಗೈ ದಾಂಡಿದ ಟ್ರಾವಿಸ್ ಹೆಡ್ ಮತ್ತು ಆಡಂ ಝಂಪಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ (ನಾಯಕ): 2023 ರಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ರೊಹಿತ್ ಶರ್ಮಾ 52 ರ ಸರಾಸರಿಯಲ್ಲಿ ಒಟ್ಟು 1255 ರನ್ ಗಳಿಸುವ ಮೂಲಕ ತನ್ನ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದರು.
ಶುಭ್‌ಮನ್ ಗಿಲ್: ಕಳೆದ ವರ್ಷ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದು ಶುಭ್‌ಮನ್ ಗಿಲ್. ಒಟ್ಟು 1584 ರನ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ: 2023ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ 1377 ರನ್ ಬಾರಿಸಿ ಹಲವು ದಾಖಲೆ ನಿರ್ಮಿಸಿದ್ದರು. ಸಚಿನ್ ಅವರ ಓಡಿಐ ಶತಕಗಳ ದಾಖಲೆಯನ್ನು ಸರಿಗಟ್ಟಿದ ಕೀರ್ತಿ ಕೊಹ್ಲಿಗೆ ದಕ್ಕಿದೆ
ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ಪರ ವೇಗಿ ಮೊಹಮ್ಮದ್ ಸಿರಾಜ್ ಕಳೆದ ವರ್ಷ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 44 ವಿಕೆಟ್ ಕಬಳಿಸಿದ್ದರು.
ಕುಲ್ದೀಪ್ ಯಾದವ್: ಭಾರತ ತಂಡದ ಸ್ಪಿನ್ನರ್ ಕುಲ್ದೀಪ್ ಯಾದವ್ 2023 ರಲ್ಲಿ ಒಟ್ಟು 49 ವಿಕೆಟ್ ಕಬಳಿಸಿ ಸ್ಪಿನ್ ಮೋಡಿ ಮಾಡಿದ್ದರು.
ಮೊಹಮ್ಮದ್ ಶಮಿ: ಟೀಮ್ ಇಂಡಿಯಾದ ಸೆನ್ಸೇಷನ್ ವೇಗಿ ಮೊಹಮ್ಮದ್ ಶಮಿ ಕಳೆದ ವರ್ಷ ಒಟ್ಟು 43 ವಿಕೆಟ್ ಕಬಳಿಸಿದ್ದರು. 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ 24 ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು.
ಐಸಿಸಿ 2023ರ ಏಕದಿನ ತಂಡ ಹೀಗಿದೆ:
1- ರೋಹಿತ್ ಶರ್ಮಾ (ನಾಯಕ/ಭಾರತ)
2- ಶುಭ್‌ಮನ್ ಗಿಲ್ (ಭಾರತ)
3- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)
4- ವಿರಾಟ್ ಕೊಹ್ಲಿ (ಭಾರತ)
5- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)
6- ಹೆನ್ರಿಕ್ ಕ್ಲಾಸೆನ್ (ಸೌತ್ ಆಫ್ರಿಕಾ)
7- ಮಾರ್ಕೊ ಯಾನ್ಸೆನ್ (ಸೌತ್ ಆಫ್ರಿಕಾ)
8- ಆ್ಯಡಂ ಝಂಪಾ (ಆಸ್ಟ್ರೇಲಿಯಾ)
9- ಮೊಹಮ್ಮದ್ ಸಿರಾಜ್ (ಭಾರತ)
10- ಕುಲ್ದೀಪ್ ಯಾದವ್ (ಭಾರತ)
11- ಮೊಹಮ್ಮದ್ ಶಮಿ (ಭಾರತ)





