ದುಬೈ: ಅಂತರಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ ಪುನಾರಾಯ್ಕೆಯಾಗಿದ್ದಾರೆ.
ಜಿಂಬಾಬ್ವೆಯ ತವೆಂಗ್ವಾ ಮುಕುಲಾನಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಗ್ರೆಗ್ ಬಾರ್ಕ್ಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ತಮಗೆ ಸಂದ ಗೌರವವಾಗಿದ್ದು, ಇದಕ್ಕಾಗಿ ನಿರ್ದೇಶಕ ಮಂಡಳಿಯ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬಾರ್ಕ್ಲೆ ಪ್ರತಿಕ್ರಿಯಿಸಿದ್ದಾರೆ. ಇವರು ಆಕ್ಲೆಂಡ್ ಮೂಲದ ವಕೀಲರಾಗಿರುವ ಬಾರ್ಕ್ಲೆ, ನ್ಯೂಜಿಲೆಂಡ್ ಕ್ರಿಕೆಟ್ ಮತ್ತು 2015ರ ವಿಶ್ವಕಪ್ ಟೂರ್ನಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.